ಲ್ಯಾಂಡ್ ಮಾರ್ಕ್ ಆಕ್ಸಿಜನ್ ಉದ್ಘಾಟನೆ: ಫೀನಿಕ್ಸ್, ಲೆಕ್ಸಾ, ಯೋಜನೆಗಳಿಗೆ ಚಾಲನೆ

ಮಂಗಳೂರು, ಅ.26:ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ಲ್ಯಾಂಡ್ ಮಾರ್ಕ್ ಇನ್ಫ್ರಾಟೆಕ್ ತೊಕ್ಕೊಟ್ಟಿನಲ್ಲಿ ನಿರ್ಮಿಸಲಾಗುವ ಆಕ್ಸಿಜನ್ ವಸತಿ ಸಮುಚ್ಛಯದ ಉದ್ಘಾಟನೆ ಹಾಗೂ ಮೂರು ನೂತನ ಯೋಜನೆಗಳಾದ ಫೀನಿಕ್ಸ್, ಲೆಕ್ಸಾ ಮತ್ತು ಆಯುಷ್‌ಗಳಿಗೆ ಶಿಲಾನ್ಯಾಸ ದೊಂದಿಗೆ ಚಾಲನೆ ನೀಡಲಾಯಿತು.
ನಗರದ ಮಿಲಾಗ್ರೀಸ್ ಜುಬಿಲಿ ಸಭಾಂಗಣದಲ್ಲಿ ಭಾಗವಹಿಸಿದ ಅತಿಥಿಗಳು ಇಂದು ಯೋಜನೆಗೆ ಚಾಲನೆ ನೀಡಿದರು.
ಮನಪಾ ಮೇಯರ್ ಭಾಸ್ಕರ್.ಕೆ ಲ್ಯಾಂಡ್ ಮಾರ್ಕ್ ಫೀನಿಕ್ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಾ, ಮಂಗಳೂರು ನಗರ ಸುಂದರ ನಗರವಾಗಲು ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಲ್ಡರುಗಳ ಪಾತ್ರವೂ ಇದೆ. ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಉತ್ತಮ ಚರಂಡಿ, ರಸ್ತೆ, ಕುಡಿಯಲು ನೀರು, ದಾರಿ ದೀಪದ ವ್ಯವಸ್ಥೆ, ಸುಸಜ್ಜಿತ ಫುಟ್‌ಪಾತ್ ಮೊದಲಾದ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಈ ಎಲ್ಲಾ ಸೌಲಭ್ಯಗಳನ್ನು ಜನರಿಗೆ ಒದಗಿಸಿಕೊಡುವಲ್ಲಿ ಮಹಾನಗರ ಪಾಲಿಕೆ ಶ್ರಮಿಸುತ್ತಿದೆ. ಸಾರ್ವಜನಿಕರ ಸಹಕಾರ ದೊರೆತಾಗ ಈ ಕೆಲಸ ಇನ್ನಷ್ಟು ಸುಲಭವಾಗುತ್ತದೆ. ಮುಂದಿನ ಕೆಲವು ವರ್ಷಗಳಲ್ಲಿ ಮಂಗಳೂರು ನಗರದ ಚಿತ್ರಣವೇ ಬದಲಾಗಲಿದೆ ನಗರದ ಅಭಿವೃದ್ಧಿಗೆ ಕಾರಣವಾಗಿರುವ ಎಲ್ಲಾ ನಿರ್ಮಾಣ ಕ್ಷೇತ್ರದ ಸಂಸ್ಥೆಗಳನ್ನು ಅಭಿನಂದಿಸುವುದಾಗಿ ಮೇಯರ್ ಭಾಸ್ಕರ್ ಶುಭ ಹಾರೈಸಿದರು.
ಲ್ಯಾಂಡ್ ಮಾರ್ಕ್ ಆಕ್ಸಿಜನ್ ಉದ್ಘಾಟನೆ
ನಿಟ್ಟೆ ವಿಶ್ವ ವಿದ್ಯಾನಿಲಯದ ಸಹಕುಲಾಧಿಪತಿ ವಿಶಾಲ್ ಹೆಗ್ಡೆ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಉಳಿದ ಉದ್ಯಮ ಕ್ಷೇತ್ರದಂತೆ ಏಳು ಬೀಳುಗಳಿದ್ದರೂ ನಗರದಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಗಳು ಜೀವಂತವಾಗಿ ಉಳಿದುಕೊಂಡು ಸಮಸ್ಯೆಗಳು ನಿಭಾಯಿಸಿ ಮುನ್ನಡೆಯುತ್ತಿದೆ. ನಗರದ ಅಭಿವೃದ್ಧಿಗೆ ಈ ಸಂಸ್ಥೆಗಳು ಮುಂದೆಯೂ ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಕ್ರೆಡೈಯ ಮಂಗಳೂರು ಘಟಕದ ಅಧ್ಯಕ್ಷ ಡಿ.ಬಿ.ಮೆಹ್ತಾ ಲ್ಯಾಂಡ್ ಮಾರ್ಕ್ ಲೆಕ್ಸಾ ಯೋಜನೆಗೆ ಚಾಲನೆ ನೀಡಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷ ಲಾಭ ಇಳಿಕೆಯಾಗಿದ್ದರೂ ಮುಂದಿನ ವರ್ಷಗಳು ಹೆಚ್ಚು ಆಶಾದಾಯಕವಾಗಲಿದೆ. ಸರಕಾರದ ನೀತಿಯೂ ಗ್ರಾಹಕರು ವಂಚನೆಗೊಳಗಾಗುವುದನ್ನು ತಡೆಯಲು ರೂಪು ಗೊಂಡಿದೆ ಎಂದು ಲ್ಯಾಂಡ್ ಮಾರ್ಕ್ ಯೋಜನೆಗೆ ಶುಭ ಹಾರೈಸಿದರು.
ಮನಪಾ ಸದಸ್ಯಅಬ್ದುಲ್ ರವೂಫ್ ಲ್ಯಾಂಡ್ ಮಾರ್ಕ್ ಆಯುಷ್ ಯೋಜನೆಗೆ ಚಾಲನೆ ನೀಡಿ, ನಗರದ ಬೆಳವಣಿಗೆಗೆ ಕಾರಣವಾಗುತ್ತಿರುವ ಲ್ಯಾಂಡ್ ಮಾರ್ಕ್ ಯೋಜನೆಗಳಿಗೆ ಶುಭ ಹಾರೈಸಿದರು.
ಲ್ಯಾಂಡ್ ಮಾರ್ಕ್ ಇನ್‌ಫ್ರಾಟೆಕ್ ಸಂಸ್ಥೆ ಸುರಕ್ಷತೆ, ಉತ್ತಮ ಗುಣಮಟ್ಟ ದೊಂದಿಗೆ ನೂತನ ತಂತ್ರಜ್ಞಾನಬಳಕೆಯೊಂದಿಗೆ ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ರುತ್ತದೆ ಲ್ಯಾಂಡ್ ಮಾರ್ಕ್ ಇನ್ ಫ್ರಾಟೆಕ್ ಮೂಲಕ ನಾಲ್ಕು ಮಹಡಿಯ ಲ್ಯಾಂಡ್ ಮಾರ್ಕ್ ಲೆಕ್ಸಾ ವಸತಿ ಸಮುಚ್ಛಯ ನಗರದ ಫಳ್ನೀರ್ ಎಸ್.ಎಲ್. ಮಥಾಯಸ್ ರಸ್ತೆಯ ಬಳಿ ನಿರ್ಮಾಣವಾಗಲಿದೆ. ನಗರದ ಹಂಪನಕಟ್ಟೆಯ ಬಳಿ ಬಹುಮಹಡಿಯ ಲ್ಯಾಂಡ್ ಮಾರ್ಕ್ ಫೀನಿಕ್ಸ್ ವಾಣಿಜ್ಯ ಸಂಕೀರ್ಣವಾಗಿ ನಿರ್ಮಾಣವಾಗಲಿದೆ. ನಗರದ ಹೈಲ್ಯಾಂಡ್ ಆಸ್ಪತ್ರೆಯ ಬಳಿ ಲ್ಯಾಂಡ್ ಮಾರ್ಕ್ ಆಯುಷ್ ಮಲ್ಟಿ ಸ್ಫೆಷಾಲಿಟಿ ಕ್ಲಿನಿಕ್ ಆರೋಗ್ಯ ಕ್ಷೇತ್ರದ ಸಕಲ ಸೇವೆಯನ್ನು ಒದಗಿಸಲಿದೆ ಎಂದು ಸಂಸ್ಥೆಯ ಪ್ರವರ್ತಕ ಮತ್ತು ಆಡಳಿತ ನಿರ್ದೇಶಕ ಜಿ. ಶಬೀರ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಸಮಾರಂಭದಲ್ಲಿ ಮನಪಾ ಸದಸ್ಯರಾದ ನವೀನ್ ಡಿ ಸೋಜ,ಎ.ಸಿ.ವಿನಯ ರಾಜ್,ಪ್ರೇಮಾನಂದ ಶೆಟ್ಟಿ,ಉಳ್ಳಾಲ ನಗರ ಸಭೆಯ ಸದಸ್ಯ ಮುಷ್ತಾಕ್ ಪಟ್ಲ ಹಾಗೂ ಹಸನ್ ಮೊಹ್ತೇಶ್ಯಾಂ, ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು. ಸಾಹಿಲ್ ಝಾಹಿರ್ ಕಾರ್ಯಕ್ರಮ ನಿರೂಪಿಸಿದರು.







