'ಸರಳವಾದ ಮರಳುನೀತಿ ಜಾರಿಗೊಳಿಸಿ; ಜನರ ಸಮಸ್ಯೆ ಬಗೆಹರಿಸಿ'
ಸರಕಾರಕ್ಕೆ ಜಯಪ್ರಕಾಶ್ ಹೆಗ್ಡೆ ಪತ್ರ
ಉಡುಪಿ, ಅ.26: ಮರಳುಗಾರಿಕೆ ನೀತಿಯಲ್ಲಿರುವ ತೊಡಕಿನಿಂದ ಸಾರ್ವಜನಿಕರಿಗೆ ಆಗುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶ ದಿಂದ ಕೂಡಲೇ ‘ಸರಳವಾದ ಮರಳುನೀತಿ’ಯನ್ನು ಜಾರಿಗೊಳಿಸಿ ಮರಳು ಗಾರಿಕೆಯನ್ನು ಪುನರಾರಂಭಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಮಾಜಿ ಸಂಸದ ಹಾಗೂ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮರಳುಗಾರಿಕೆ ನೀತಿಯಲ್ಲಿ ಆಗಾಗ ಆಗುತ್ತಿರುವ ಬದಲಾವಣೆಯ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಗಳು ಪರೋಕ್ಷವಾಗಿ ಎಲ್ಲಾ ಕ್ಷೇತ್ರಕ್ಕೂ ಎದುರಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ. ಆಯಾಯ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಕಾನೂನಿನಲ್ಲಿ ತಿದ್ದುಪಡಿ ತಂದು ಸರಳವಾದ ನೀತಿಯನ್ನು ರೂಪಿಸಿ ಜಿಲ್ಲಾವಾರು ಮರಳು ನೀತಿಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಸಿಆರ್‌ಝಡ್ ಹಾಗೂ ನಾನ್‌ಸಿಆರ್‌ಝಡ್ ಪ್ರದೇಶ ಗಳು ಒಳಪಡುವುದರಿಂದ ಈ ಎರಡೂ ಪ್ರದೇಶಗಳಿಗೆ ಅನ್ವಯವಾಗುವಂತೆ ಏಕರೂಪದ ಮರಳು ನೀತಿಯ ಅಗತ್ಯವಿದೆ. ಮರಳುಗಾರಿಕೆ ಉದ್ಯಮದಲ್ಲಿ ಆಗುತ್ತಿರುವ ಅವ್ಯವಹಾರವನ್ನು ತಪ್ಪಿಸುವ ಉದ್ದೇಶದಿಂದ ಸರಕಾರ ಆಗಾಗ ಬದಲಾವಣೆ ಮಾಡುತ್ತಿರುವ ಮರಳುಗಾರಿಕಾ ನೀತಿಯಿಂದಾಗಿ ನಾನಾ ರೀತಿ ಸಮಸ್ಯೆಗಳು ಉಂಟಾಗುತ್ತಿವೆ. ಮರಳುಗಾರಿಕೆ ನಿಷೇಧದ ಪ್ರಭಾವ ಪರೋಕ್ಷ ವಾಗಿ ಎಲ್ಲಾ ಕಾರ್ಮಿಕ ವೃಂದದ ಮೇಲೆ ಬೀಳುತ್ತಿವೆ. ಕರಾವಳಿಯಲ್ಲಿ ಕಟ್ಟಡ ಕಾಮಗಾರಿಗಳು ನಿಲುಗಡೆಯಾಗಿ, ಜಿಲ್ಲೆಯ ಎಲ್ಲಾ ಕಾರ್ಮಿಕರು ಕೆಲಸವಿಲ್ಲದೇ ಕೂರುವಂತಾಗಿದೆ ಎಂದು ಹೇಳಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಸಿಆರ್‌ಝಡ್ ಹಾಗೂ ನಾನ್‌ಸಿಆರ್‌ಝಡ್ ಪ್ರದೇಶ ಗಳು ಒಳಪಡುವುದರಿಂದ ಈ ಎರಡೂ ಪ್ರದೇಶಗಳಿಗೆ ಅನ್ವಯವಾಗುವಂತೆ ಏಕರೂಪದ ಮರಳು ನೀತಿಯ ಅಗತ್ಯವಿದೆ. ಮರಳುಗಾರಿಕೆ ಉದ್ಯಮದಲ್ಲಿ ಆಗುತ್ತಿರುವ ಅವ್ಯವಹಾರವನ್ನು ತಪ್ಪಿಸುವ ಉದ್ದೇಶದಿಂದ ಸರಕಾರ ಆಗಾಗ ಬದಲಾವಣೆ ಮಾಡುತ್ತಿರುವ ಮರಳುಗಾರಿಕಾ ನೀತಿಯಿಂದಾಗಿ ನಾನಾ ರೀತಿ ಸಮಸ್ಯೆಗಳು ಉಂಟಾಗುತ್ತಿವೆ. ಮರಳುಗಾರಿಕೆ ನಿಷೇದಪ್ರಾವ ಪರೋಕ್ಷ ವಾಗಿ ಎಲ್ಲಾ ಕಾರ್ಮಿಕ ವೃಂದದ ಮೇಲೆ ಬೀಳುತ್ತಿವೆ. ಕರಾವಳಿಯಲ್ಲಿ ಕಟ್ಟಡ ಕಾಮಗಾರಿಗಳು ನಿಲುಗಡೆಯಾಗಿ, ಜಿಲ್ಲೆಯ ಎಲ್ಲಾ ಕಾರ್ಮಿಕರು ಕೆಲಸವಿಲ್ಲದೇ ಕೂರುವಂತಾಗಿದೆ ಎಂದು ಹೇಳಿದ್ದಾರೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೊದಲಿನಿಂದಲೂ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತಿದ್ದು, ಆಗ ಜನರಿಗೂ ಕ್ಲಪ್ತ ಸಮಯ ದಲ್ಲಿ ಸೂಕ್ತ ಬೆಲೆಗೆ ಮರಳು ಸಿಗುತ್ತಿತ್ತು. ಈ ಪದ್ಧತಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮರಳು ಮಾಫಿಯಾ ಹಾವಳಿ ಇದ್ದಿರಲಿಲ್ಲ. ಆದರೆ ಈಗ ಸರಕಾರವೇ ಮರಳು ನೀತಿ ಪ್ರಕಟಿಸಿ, ಮರಲುಗಾರಿಕೆಯ ಪರವಾನಿಗೆಯನ್ನು ಟೆಂಡರ್ ಮೂಲಕ ನೀಡುವ ಪದ್ಧತಿ ಜಾರಿಗೊಳಿಸಿ, ಪರೋಕ್ಷವಾಗಿ ದೊಡ್ಡ ಮಟ್ಟದ ಮರಳು ಮಾಫಿಯಾಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಮೊದಲಿನಂತೆ ಸಣ್ಣ ಮಟ್ಟದ ವ್ಯಾಪಾರಸ್ಥರಿಗೆ ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಮಾಡಿಕೊಡು ವುದರೊಂದಿಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆಂದು ಜಯಪ್ರಕಾಶ್ ಹೆಗ್ಡೆ ಮನವಿ ಮಾಡಿದ್ದಾರೆ.







