ಪ್ರೊ ಕಬಡ್ಡಿ ಲೀಗ್: ಪಾಟ್ನಾಕ್ಕೆಜಯ

ಪಾಟ್ನಾ, ಅ.26: ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 41-30 ಅಂತರದಿಂದ ಮಣಿಸಿರುವ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ಶುಕ್ರವಾರ ತವರು ನೆಲದಲ್ಲಿ ಗೆಲುವಿನ ಆರಂಭ ಪಡೆದಿದೆ.
ಪರ್ದೀಪ್ ನರ್ವಾಲ್ 11 ಅಂಕ ಗಳಿಸುವುದರೊಂದಿಗೆ ಪಾಟ್ನಾದ ಗೆಲುವಿಗೆ ಭದ್ರಬುನಾದಿ ಹಾಕಿದರು. ನರ್ವಾಲ್‌ಗೆ ಮಂಜೀತ್ 10 ಅಂಕ ಗಳಿಸುವ ಮೂಲಕ ಉತ್ತಮ ಸಾಥ್ ನೀಡಿದರು.
ಪಾಟ್ನಾದ ಪರ ಜೈದೀಪ್ ಹಾಗೂ ವಿಕಾಸ್ ಕಾಳೆ ಒಟ್ಟಿಗೆ 10 ಪಾಯಿಂಟ್ಸ್ ಕಲೆ ಹಾಕಿದರು. ಸೂಪರ್-10 ಮೈಲುಗಲ್ಲು ತಲುಪಿದ ನರ್ವಾಲ್ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಸೂಪರ್-10ರ ನಾಯಕನಾಗಿ ಹೊರಹೊಮ್ಮಿದ್ದಾರೆ.
500 ರೈಡ್ ಪಾಯಿಂಟ್ಸ್ ಗಳಿಸಿದ ಜೈಪುರದ ಅನೂಪ್ ಕುಮಾರ್ ಕೂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೈಲುಗಲ್ಲು ತಲುಪಿದರು. ಕುಮಾರ್ 8 ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರಾಗಿಸಲು ಸಾಧ್ಯವಾಗಲಿಲ್ಲ.
ಗುಜರಾತ್‌ಗೆ ಗೆಲುವು
ದ್ವಿತೀಯಾರ್ಧದಲ್ಲಿ ಉತ್ತಮ ಹೋರಾಟ ನೀಡಿದ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡ ತಮಿಳ್ ತಲೈವಾಸ್ ವಿರುದ್ಧ ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ 36-25 ಅಂತರದಿಂದ ಜಯ ಸಾಧಿಸಿದೆ.
ಒಂದು ವಾರದ ವಿಶ್ರಾಂತಿ ಬಳಿಕ ವಾಪಸಾದ ಗುಜರಾತ್ ಲೀಗ್‌ನಲ್ಲಿ ಸತತ ಎರಡನೇ ಜಯ ದಾಖಲಿಸಿತು. ಗುಜರಾತ್ ತಂಡ ಪಾಟ್ನಾ ಪೈರೇಟ್ಸ್ ತಂಡವನ್ನು 34-28 ರಿಂದ ಮಣಿಸಿತ್ತು. ಇದೀಗ ತಮಿಳ್ ತಂಡದ ವಿರುದ್ಧ ಈ ಋತುವಿನಲ್ಲಿ ಮೊದಲ ಜಯ ದಾಖಲಿಸಿತು.







