ಸಿಎಂ ಹಾಗೂ ಡಿಸಿಎಂ ವಾಲ್ಮೀಕಿ ಗುರುಪೀಠಕ್ಕೆ ಕ್ಷಮೆ ಕೇಳುವಂತೆ ಒತ್ತಾಯ
ಬೆಂಗಳೂರು, ಅ. 27: ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗದೆ ಸಮಸ್ತ ವಾಲ್ಮೀಕಿ ಜನಾಂಗಕ್ಕೆ ಅವಮಾನ ಮಾಡಿರುವ ಸಿಎಂ ಹಾಗೂ ಡಿಸಿಎಂ ವಾಲ್ಮೀಕಿ ಗುರುಪೀಠಕ್ಕೆ ನ.1ರೊಳಗೆ ಹೋಗಿ ಗುರುಗಳ ಕ್ಷಮೆ ಕೇಳಬೇಕು ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಒತ್ತಾಯಿಸಿದೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಯುವಪಡೆಯ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ವಾಲ್ಮೀಕಿ ಪ್ರಶಸ್ತಿಯನ್ನು ಸ್ವೀಕರಿಸಲು ದೇವೇಗೌಡರ ಕುಟುಂಬಕ್ಕೆ ಸಂಬಂಧಿಸಿದ ಯಾರೊಬ್ಬರನ್ನೂ ಕಳುಹಿಸದೆ ಇರುವುದು ಸಹಿಸಲು ಆಗದ ಅವಮಾನ ಹಾಗೂ ಪ್ರಶಸ್ತಿ ಸ್ವೀಕರಿಸಬೇಕಿದ್ದ ಮಾಜಿ ಪ್ರಧಾನಮಂತ್ರಿ ದೇವೇಗೌಡರು ಉದ್ದೇಶ ಪೂರ್ವಕವಾಗಿ ಕಾರ್ಯಕ್ರಮಕ್ಕೆ ಬರಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಬಂದು ಕತ್ತಿ, ಗದೆ, ಗುರಾಣಿಯೊಂದಿಗೆ ಸನ್ಮಾನಿಸಿದ್ದು, ಇದೇ ವಾಲ್ಮೀಕಿ ಜನಾಂಗ ಎನ್ನುವುದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮರೆತಿದ್ದಾರೆ ಎಂದು ಅವರು ಹೇಳಿದರು.





