ಆರು ಸಾಹಿತಿಗಳಿಗೆ ಡಿಎಸ್ ಮ್ಯಾಕ್ಸ್ ಪ್ರಶಸ್ತಿ ಪುರಸ್ಕಾರ
ಬೆಂಗಳೂರು, ಅ. 27: ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್ ಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದು, ನಾಡಿನ ಸುಪ್ರಸಿದ್ಧ ಆರು ಮಂದಿ ಸಾಹಿತಿಗಳಿಗೆ ಡಿಎಸ್ ಮ್ಯಾಕ್ಸ್ ಸಾಹಿತ್ಯ ಪ್ರಶಸ್ತಿ ಘೋಷಿಸಿದೆ.
ಈ ಬಾರಿಯ ಪ್ರಶಸ್ತಿಗೆ ಡಾ. ಎಂ.ಜಿ.ನಾಗರಾಜ್, ಡಾ.ಡಿ.ಎನ್.ಅಕ್ಕಿ, ಡಾ.ವೀರಣ್ಣ ರಾಜೂರ, ಡಾ.ಜಗನ್ನಾಥ ಹೆಬ್ಬಾಳೆ, ಶ್ರೀಮತಿ ಪ್ರೇಮಾಭಟ್, ಡಾ.ಎಚ್.ಟಿ. ಶೈಲಜಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ಕಾರ್ಯ ನಿರ್ವಾಹಕ ನಿರ್ದೇಶಕ ಎಸ್.ಪಿ. ದಯಾನಂದ್ ತಿಳಿಸಿದ್ದಾರೆ.
ಎಲ್ಲ ಪ್ರಶಸ್ತಿಗಳು 15ಸಾವಿರ ರೂ. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ. ಕಾರ್ಯಕ್ರಮವನ್ನು ಬಿಬಿಎಂಪಿ ಮೇಯರ್ ಗಂಗಾಬಿಕೆ ಉದ್ಘಾಟಿಸಲಿದ್ದು, ಮುಖ್ಯ ಅಥಿತಿಗಳಾಗಿ ಸಂಸ್ಕೃತ ವಿಶ್ವ ವಿದ್ಯಾನಿಲಯ ಮಾಜಿ ಉಪಕುಲಪತಿಗಳು, ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ ಬಿಬಿಎಂಪಿ ಸದಸ್ಯ ಆನಂದ ಭಾಗವಹಿಸಿ ಪ್ರಶಸ್ತಿ ಪುರಸ್ಕೃತನ್ನು ಗೌರವಿಸಲಿದ್ದಾರೆ ಎಂದು ಹೇಳಿದ್ದಾರೆ.
ಇದೆ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಜತೆಗೆ ತಾಯಿ ಭುವನೇಶ್ವರಿ ದೇವಿಯ ಪ್ರತಿಮೆ ಜೊತೆಗೆ ಕನ್ನಡದ ಬೃಹತ್ ಧ್ವಜದ ಮೆರವಣಿಗೆಯನ್ನು ನಮ್ಮ ಕಚೇರಿಗೆ ಹೊಂದಿಕೊಂಡಿರುವ ನಾಗವಾರದ ರಿಂಗ್ ರಸ್ತೆಯಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನಾಗವಾರ ರಿಂಗ್ ರಸ್ತೆಯ ಬೆಸ್ಕಾಂ ಕಚೇರಿ ಬಳಿಯ ಎಚ್‌ಬಿಆರ್ ಬಡಾವಣೆಯಲ್ಲಿನ ಸಂಸ್ಥೆಯ ಆವರಣದಲ್ಲಿ ಈ ಕಾರ್ಯಕ್ರಮ ಏರ್ಪಡಿಸಿರುವುದಾಗಿ ತಿಳಿಸಿದೆ.







