ಭಾರತ ‘ಸಿ’ ತಂಡಕ್ಕೆ ದೇವಧರ್ ಟ್ರೋಫಿ
ರಹಾನೆ ಪಂದ್ಯಶ್ರೇಷ್ಠ

ಹೊಸದಿಲ್ಲಿ, ಅ.27: ನಾಯಕ ಅಜಿಂಕ್ಯ ರಹಾನೆ(144), ಇಶಾನ್ ಕಿಶನ್(114)ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ‘ಸಿ’ ತಂಡ ಭಾರತ ‘ಬಿ’ ತಂಡವನ್ನು 29 ರನ್‌ಗಳಿಂದ ಮಣಿಸಿತು. ಇದರೊಂದಿಗೆ ದೇವಧರ್ ಏಕದಿನ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಇಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಸಿ’ ತಂಡ ರಹಾನೆ(144,156 ಎಸೆತ, 9 ಬೌಂಡರಿ,3 ಸಿಕ್ಸರ್) ಹಾಗೂ ಕಿಶನ್(114,87 ಎಸೆತ, 11 ಬೌಂಡರಿ, 6 ಸಿಕ್ಸರ್)ಮೊದಲ ವಿಕೆಟ್‌ಗೆ ಸೇರಿಸಿದ 210 ರನ್ ಜೊತೆಯಾಟದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 352 ರನ್ ಕಲೆ ಹಾಕಿತು. ಗೆಲ್ಲಲು ಕಠಿಣ ಸವಾಲು ಪಡೆದ ಭಾರತ ‘ಬಿ’ ತಂಡ ನಾಯಕ ಶ್ರೇಯಸ್ ಅಯ್ಯರ್ ಭರ್ಜರಿ ಶತಕ(148,114 ಎಸೆತ, 11 ಬೌಂಡರಿ, 8 ಸಿಕ್ಸರ್) ಹಾಗೂ ಆರ್.ಗಾಯಕ್ವಾಡ್(60,56 ಎ, 7 ಬೌ, 1 ಸಿ.)ಅರ್ಧಶತಕದ ಕೊಡುಗೆಯ ಹೊರತಾಗಿಯೂ 46.1 ಓವರ್‌ಗಳಲ್ಲಿ 323 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಭಾರತ ‘ಸಿ’ ತಂಡದ ಪಪ್ಪು ರಾಯ್(3-75) ಯಶಸ್ವಿ ಪ್ರದರ್ಶನ ನೀಡಿದರೆ, ನಿತಿನ್ ಸೈನಿ(2-47), ರಜನೀಶ್ ಗುರ್ಬಾನಿ(2-61), ವಿ.ಶಂಕರ್(2-62) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ಇಂಡಿಯಾ ‘ಬಿ’ ತಂಡಕ್ಕೆ ಕಡಿವಾಣ ಹಾಕಿದರು.
ಭಾರತ ‘ಸಿ’ ತಂಡದ ನಾಯಕ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.





