ಸ್ವಿಟೋಲಿನಾ ಫೈನಲ್‌ಗೆ
ಡಬ್ಲ್ಯುಟಿಎ ಫೈನಲ್ಸ್
ಸಿಂಗಾಪುರ, ಅ.27: ರಕ್ಷಣಾತ್ಮಕವಾಗಿ ಆಡಿದ ಎಲಿನಾ ಸ್ವಿಟೋಲಿನಾ ಡಚ್ ಆಟಗಾರ್ತಿ ಕಿಕಿ ಬೆರ್ಟೆನ್ಸ್‌ರನ್ನು ಮಣಿಸುವ ಮೂಲಕ ಡಬ್ಲ್ಯುಟಿಎ ಫೈನಲ್ಸ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಉಕ್ರೇನ್ ಆಟಗಾರ್ತಿ ಸ್ವಿಟೋಲಿನಾ ಅವರು ಬೆರ್ಟೆನ್ಸ್‌ರನ್ನು 7-5, 6-7(5), 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಸ್ವಿಟೋಲಿನಾ ಫೈನಲ್‌ನಲ್ಲಿ ಅಮೆರಿಕದ ಸ್ಲೋಯಾನ್ ಸ್ಟೀಫನ್ಸ್ ಅಥವಾ ಝೆಕ್‌ನ ಕರೊಲಿನಾ ಪ್ಲಿಸ್ಕೋವಾರನ್ನು ಎದುರಿಸಲಿದ್ದಾರೆ.ಈ ಇಬ್ಬರು ಮತ್ತೊಂದು ಸೆಮಿ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.ಸಿಂಗಾಪುರ ವರ್ಷಾಂತ್ಯದ ಡಬ್ಲ್ಯುಟಿಎ ಫೈನಲ್ಸ್ ಟೆನಿಸ್ ಟೂರ್ನಿಯನ್ನು ಐದನೇ ಹಾಗೂ ಕೊನೆಯ ಬಾರಿ ಆಯೋಜಿಸುತ್ತಿದೆ.
Next Story





