ಪಟ್ಟಣ ಪಂಚಾಯತ್ ಚುನಾವಣೆ: ಕೊಡಗಿನಲ್ಲಿ ಶಾಂತಿಯುತ ಮತದಾನ
ಅ.31 ರಂದು ಮತ ಎಣಿಕೆ

ಮಡಿಕೇರಿ, ಅ.28 : ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ, ಜಿಲ್ಲೆಯ ವೀರಾಜಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂ.ಗಳ ಮತದಾನ ಪ್ರಕ್ರಿಯೆ ಅ.28ರಂದು ಶಾಂತಿಯುತವಾಗಿ ನಡೆಯಿತು.
ಮೂರು ಪಟ್ಟಣ ಪಂ.ಗಳಲ್ಲಿ ಒಟ್ಟು ಶೇ.74 ರಷ್ಟು ಮತದಾನವಾಗಿದೆ. ಸೋಮವಾರಪೇಟೆ ಪಟ್ಟಣ ಪಂ.ನ 11, ಕುಶಾಲನಗರ ಪಟ್ಟಣ ಪಂ. ನ 16 ಹಾಗೂ ವೀರಾಜಪೇಟೆ ಪಟ್ಟಣ ಪಂ. ನ 18 ವಾರ್ಡ್‍ಗಳಿಗೆ ಚುನಾವಣೆ ನಡೆಯಿತು. ಪ್ರತೀ ವಾರ್ಡ್‍ಗೆ ಒಂದರಂತೆ ಅಂದರೆ ಒಟ್ಟು 45 ಮತಗಟ್ಟೆಗಳನ್ನು ತೆರೆಯಲಾಗಿತ್ತು.
ಮೂರು ಪಟ್ಟಣ ಪಂ. ವ್ಯಾಪ್ತಿಯ ಪುರುಷ 15,459, 15,324 ಮಹಿಳೆಯರು ಸೇರಿ 30,786 ಮಂದಿ ಮತದಾರರು ಮತ ಚಲಾಯಿಸುವ ಅರ್ಹತೆ ಹೊಂದಿದ್ದರು. ಅದರಂತೆ ಸೋಮವಾರಪೇಟೆ ಪಟ್ಟಣ ಪಂ. ವ್ಯಾಪ್ತಿಯಲ್ಲಿ ಪುರುಷ 2562, ಮಹಿಳೆ 2699 ಒಟ್ಟು 5,261 ಮಂದಿ ಮತದಾರು, ಕುಶಾಲನಗರ ಪಟ್ಟಣ ಪಂ. ವ್ಯಾಪ್ತಿಯಲ್ಲಿ ಪುರುಷ 5899, ಮಹಿಳೆ 5700 ಒಟ್ಟು 11,599 ಮಂದಿ ಹಾಗೂ ವೀರಾಜಪೇಟೆ ಪಟ್ಟಣ ಪಂ. ವ್ಯಾಪ್ತಿಯಲ್ಲಿ 6998 ಪುರುಷ, 6925 ಮಹಿಳೆ ಒಟ್ಟು 13926 ಮಂದಿ ಮತದಾರರಿದ್ದರು. ಸೋಮವಾರಪೇಟೆ ಪಟ್ಟಣ ಪಂ. ವ್ಯಾಪ್ತಿಯ 11 ಮತಗಟ್ಟೆಗಳ ಪೈಕಿ 3 ಸೂಕ್ಷ್ಮ, 2 ಅತಿ ಸೂಕ್ಷ್ಮ, ಕುಶಾಲನಗರ ಪಟ್ಟಣ ಪಂ. ವ್ಯಾಪ್ತಿಯ 16 ಮತಗಟ್ಟೆಗಳ ಪೈಕಿ 4 ಸೂಕ್ಷ್ಮ ಹಾಗೂ 3 ಅತಿ ಸೂಕ್ಷ್ಮ, ವೀರಾಜಪೇಟೆ ಪಟ್ಟಣ ಪಂ. ವ್ಯಾಪ್ತಿಯ 18 ಮತಗಟ್ಟೆಗಳ ಪೈಕಿ ಮೂರು ಸೂಕ್ಷ್ಮ ಮತ್ತು 2 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿತ್ತು.
ಅ.31 ರಂದು ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.







