ದಿಲ್ಲಿ: ಋತುಮಾನದ ಅತ್ಯಂತ ಕಳಪೆ ವಾಯು ಗುಣಮಟ್ಟ

ಹೊಸದಿಲ್ಲಿ, ಅ. 28: ದಿಲ್ಲಿಯಲ್ಲಿ ಗಾಢ ಮಬ್ಬು ಕವಿದಿದ್ದು, ರವಿವಾರ ಈ ಋತುಮಾನದ ಅತ್ಯಂತ ಕಳಪೆ ವಾಯು ಗುಣಮಟ್ಟ ದಾಖಲಾಗಿದೆ. ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಾಂಕ 381 ದಾಖಲಾಗಿದೆ. ಇದು ಈ ಋತುಮಾನದಲ್ಲೇ ದಾಖಲಾದ ಅತಿ ಕಳಪೆ ಗುಣಮಟ್ಟ. ಇದು ಅಪಾಯಕಾರಿ ವಾಯು ಗುಣಮಟ್ಟಕ್ಕಿಂತ ಸ್ಪಲ್ಪ ಕಡಿಮೆ ಇದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶ ಹೇಳಿದೆ.
ಎಕ್ಯೂಐ ಪ್ರಕಾರ 0 ಹಾಗೂ 50ರ ನಡುವೆ ಉತ್ತಮ, 51 ಹಾಗೂ 100 ನಡುವೆ ತೃಪ್ತಿಕರ, 101 ಹಾಗೂ 200 ನಡುವೆ ಮಧ್ಯಮ, 201 ಹಾಗೂ 300 ನಡುವೆ ಕಳಪೆ, 301 ಹಾಗೂ 400 ನಡುವೆ ಅತ್ಯಂತ ಕಳಪೆ, 401 ಹಾಗೂ 500 ನಡುವೆ ಗಂಭೀರ ಎಂದು ಪರಿಗಣಿಸಲಾಗಿದೆ. ದಿಲ್ಲಿಯ ವಿವಿಧ ಭಾಗಗಳಲ್ಲಿ ಇರುವ 10 ಮಾಲಿನ್ಯ ನಿಗಾ ಕೇಂದ್ರಗಳು ಅಪಾಯಕಾರಿ ವಾಯು ಗುಣಮಟ್ಟ ಇರುವುದನ್ನು ದಾಖಲಿಸಿದೆ. 20 ಮಾಲಿನ್ಯ ನಿಗಾ ಕೇಂದ್ರಗಳು ಕಳಪೆ ವಾಯು ಗುಣಮಟ್ಟ ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
Next Story





