ನಿಂತಿದ್ದ ಬೈಕ್‍ಗೆ ಮತ್ತೊಂದು ಬೈಕ್ ಢಿಕ್ಕಿ: ನಿವೃತ್ತ ಶಿಕ್ಷಕ ಸಾವು

ಮಂಡ್ಯ, ಅ.28: ನಿಂತಿದ್ದ ಬೈಕ್‍ಗೆ ಮತ್ತೊಂದು ಬೈಕ್ ಢಿಕ್ಕಿಯೊಡೆದು ನಿಂತಿದ್ದ ಬೈಕ್‍ನ ಸವಾರ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕು ಮಾರೇಹಳ್ಳಿ ಬಳಿ ನಡೆದಿದೆ.
ಮಳವಳ್ಳಿ ಪಟ್ಟಣದ ನಿವೃತ್ತ ಶಿಕ್ಷಕ ಮರಿಸ್ವಾಮಿ(65) ಮೃತ ವ್ಯಕ್ತಿ. ಇವರು ಪತ್ನಿ ಜತೆ ತೆಂಕಹಳ್ಳಿಯ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮಾರ್ಗಮಧ್ಯೆ ಮೊಬೈಲ್‍ನಲ್ಲಿ ಮಾತನಾಡಲು ಬೈಕ್ ನಿಲ್ಲಿಸಿಕೊಂಡು ನಿಂತಿದ್ದಾಗ, ಮತ್ತೊಂದು ಬೈಕ್ ಬಂದು ಢಿಕ್ಕಿಯಾಗಿ ಮರಿಸ್ವಾಮಿ ತೀವ್ರ ಗಾಯಗೊಂಡರು. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Next Story





