ಅಕ್ರಮ ಟೋಲ್ಗೇಟ್ ವಿರುಧ್ಧ ಸರ್ವ ಕಾಲೇಜು ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ

ಮಂಗಳೂರು, ಅ 29: ಅಕ್ರಮ ಟೋಲ್ಗೇಟ್ ಮುಚ್ಚಲು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಟನೆಯು ಸುರತ್ಕಲ್ ಜಂಕ್ಷನ್ ಬಳಿ ನಡೆಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಅಲ್ಫಾಝ್ ಹಮೀದ್ ಬಜಾಲ್ ನಂತೂರು ಹಲವಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವಾಗ ನೆರೆಯ ಜಿಲ್ಲೆಯಾದ ಉಡುಪಿಯಲ್ಲಿ ಮರಳು ಸಮಸ್ಯೆಯ ಬಗ್ಗೆ ಕಾಳಜಿ ವಹಿಸುತ್ತಿರುವ ದ.ಕ ಜಿಲ್ಲಾ ಸಂಸದರು ತನ್ನ ಸ್ವಂತ ಕ್ಷೇತ್ರದಲ್ಲಿ ಸುಮಾರು ಒಂದು ವಾರದಿಂದ ನಡೆಯುತ್ತಿರುವ ಅಕ್ರಮ ಟೋಲ್ಗೇಟ್ ವಿರುದ್ಧ ನಡೆಯುತ್ತಿರುವ ಧರಣಿಯನ್ನು ತನಗೇನು ಅರಿವೇ ಇಲ್ಲ ಎಂಬ ವರ್ತನೆ ಖಂಡನೀಯ ಎಂದು ಅಭಿಪ್ರಾಯ ಪಟ್ಟರು.
ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸಂಚಾಲಕರಾದ ಮಿಥುನ್ ರೈ ಪ್ರಾಸ್ತಾವಿಕ ಭಾಷಣ ಮಾಡಿದರು. ಈ ಸಂಧರ್ಭ ಎನ್.ಎಸ್.ಯು.ಐ ಪದಾಧಿಕಾರಿಗಳಾದ ರೂಪೇಶ್ ರೈ , ಸವಾದ್ ಸುಳ್ಯ , ಸುಮನ್ ಶೆಟ್ಟಿ ಹಾಗೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಶೌನಕ್ ರೈ , ನಿಶಾಂ , ಸೌರಭ್ ಶೆಟ್ಟಿ, ನಿತೇಶ್, ವಿನೀತ್, ತೇಜಸ್ ಮೊದಲಾದವರು ಉಪಸ್ಥಿತರಿದ್ದರು.





