ಯುಎಇ: ಜಾಹೀರಾತು ನಿಯಮ ಮೀರಿದರೆ ಭಾರೀ ದಂಡ

ಅಬುಧಾಬಿ, ಅ. 29: ಯುಎಇಯಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಇತರ ಆನ್‌ಲೈನ್ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳಿಗೆ ನೂತನ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಸಾಮಾಜಿಕ ಮಾಧ್ಯಮ ಹಾಗೂ ಆನ್‌ಲೈನ್‌ನಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳಿಗೆ ಈ ನಿಯಮಗಳು ನೂತನ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಿವೆ.
ನಿಯಮಗಳನ್ನು ಅನುಸರಿಸದ ಜಾಹೀರಾತುಗಳಿಂದ ಸಾರ್ವಜನಿಕರನ್ನು ರಕ್ಷಿಸುವುದಕ್ಕಾಗಿ ನೂತನ ನಿಯಮಗಳನ್ನು ರೂಪಿಸಲಾಗಿದೆ ಎಂದು ನ್ಯಾಶನಲ್ ಮೀಡಿಯ ಕೌನ್ಸಿಲ್ ತಿಳಿಸಿದೆ.
ನಿಯಮಾವಳಿಗಳನ್ನು ಅನುಸರಿಸದ ಜಾಹೀರಾತುಗಳಿಗೆ 5,000 ದಿರ್ಹಮ್ (ಸುಮಾರು 99,910 ರೂಪಾಯಿ) ದಂಡ ವಿಧಿಸಲಾಗುವುದು.
Next Story





