ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
ಉಡುಪಿ, ಅ.29: ಉಡುಪಿಯ ನಿಟ್ಟೂರು ಶನೀಶ್ವರ ದೇವಸ್ಥಾನದ ಬಳಿಯ ಜೋಪಡಿ ನಿವಾಸಿ ಬಾಗಲಕೋಟೆ ಮೂಲದ ಹೊನ್ನಪ್ಪಎಂಬವರ ಪತ್ನಿ ಲಕ್ಷ್ಮವ್ವ(43) ಎಂಬವರು ಅ.24ರಂದು ಜೋಪಡಿಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು: ಬಾಗಲಕೋಟೆ ಮೂಲದ ಉದ್ಯಾವರ ಬಾಡಿಗೆ ಮನೆ ನಿವಾಸಿ ಹನುಮಂತ ಛಲವಾದಿ(44) ಎಂಬವರು ಮೇ 2ರಂದು ರಾತ್ರಿ ಮನೆಯಲ್ಲಿ ಮಲಗಿದ್ದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





