ನಾಸಿರ್ ಮಅದನಿಗೆ ಪೆರೋಲ್ ಮಂಜೂರು

ಬೆಂಗಳೂರು, ಅ.29: ಮಡಿವಾಳ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಅಬ್ದುಲ್ ನಾಸಿರ್ ಮಅದನಿ ಅವರಿಗೆ ನ್ಯಾಯಾಲಯವು ಪೆರೋಲ್ ಮಂಜೂರು ಮಾಡಿದೆ.
2008ರ ಮಡಿವಾಳ ಸರಣಿ ಬಾಂಬ್ ಸ್ಫೋಟದ ಆರೋಪಿಯಾಗಿರುವ ಮಅದನಿಯವರಿಗೆ 2017ರಲ್ಲಿ ಮಗನ ಮದುವೆ ಹಿನ್ನೆಲೆಯಲ್ಲಿ ಪೆರೋಲ್‌ಗೆ ಅನುಮತಿ ಸಿಕ್ಕಿತ್ತು. ಇದೀಗ ತಾಯಿ ಕಾನ್ಸರ್‌ನಿಂದ ಬಳಲುತ್ತಿದ್ದು, ಅವರನ್ನು ನೋಡುವ ಸಲುವಾಗಿ ಮಅದನಿ ಪೆರೋಲ್ ಅರ್ಜಿ ಹಾಕಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಷರತ್ತುಬದ್ಧ ಪೆರೋಲ್ ರಜೆ ಮೇಲೆ ತೆರಳಲು ಅನುಮತಿ ನೀಡಿದೆ.
2010ರಿಂದಲೂ ಮಅದನಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರೂ ಜಾಮೀನು ಸಿಕ್ಕಿರಲಿಲ್ಲ. ಹೀಗಾಗಿ, ಕೆಲ ವರ್ಷಗಳ ಹಿಂದೆ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಬೆಂಗಳೂರಿನಲ್ಲಿ ಸ್ವಂತ ಖರ್ಚಿನಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಷರತ್ತು ವಿಧಿಸಿ ಮೆಡಿಕಲ್ ಬೇಲ್‌ಗೆ ಕೋರ್ಟ್ ಅನುಮತಿ ನೀಡಿತ್ತು. ಸದ್ಯ ನಗರದ ಮನೆಯೊಂದರಲ್ಲಿ ಮಅದನಿ ಚಿಕಿತ್ಸೆ ಪಡೆಯುತ್ತಿದ್ದರು.
Next Story





