ನ.12: ಪುರಭನನದಲ್ಲಿ ಕಂದಾಯ ಅದಾಲತ್
ಮಂಗಳೂರು, ಅ.30: ದ.ಕ.ಜಿಲ್ಲಾ ಮಟ್ಟದ ಕಂದಾಯ ಅದಾಲತ್ ನ.12ರಂದು ಪೂರ್ವಾಹ್ನ 11ಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ರ ಅಧ್ಯಕ್ಷತೆಯಲ್ಲಿ ನಗರದ ಪುರಭವನದಲ್ಲಿ ಜರುಗಲಿದೆ.
ಭೂಪರಿವರ್ತನೆಗೆ ಸಂಬಂಧಿಸಿ ವಿಳಂಬ ಮತ್ತಿತರ ಸಮಸ್ಯೆ, ಆರ್‌ಟಿಸಿ, ಭೂಮಾಪನ ಸಮಸ್ಯೆಯ ಅರ್ಜಿಯನ್ನು ನ.8ರ ಸಂಜೆ 5 ಗಂಟೆಯೊಳಗೆ ನೋಡಲ್ ಅಧಿಕಾರಿಯಾಗಿರುವ ಪರೀಕ್ಷಾರ್ಥ ಸಹಾಯಕ ಆಯುಕ್ತ ಸಂತೋಷ್ ಜಿ. ಅವರಿಗೆ ದ.ಕ.ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸಲ್ಲಿಸಿ ಸ್ವೀಕೃತಿಯನ್ನು ಪಡೆದು ಕೊಳ್ಳಬಹುದು. ಮಾಹಿತಿಗೆ ಮೊ.ಸಂ. 9483570317ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





