ರೋಗಿಯ ಸುರ್ಷತೆಗೆ ಆದ್ಯತೆ: ಡಾ.ರಾಮಕುಮಾರ್

ಉಡುಪಿ, ಅ.30: ರೋಗಿಯ ನೋವು ಶಮನ ಹಾಗು ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾ ಪಕ, ಶ್ರೇಷ್ಠ ಅರಿವಳಿಕೆ ತಜ್ಞ ಡಾ.ರಾಮಕುಮಾರ್ ವೆಂಕಟೇಶ್ವರನ್ ಹೇಳಿದ್ದಾರೆ.
ಉಡುಪಿಯ ಭಾರತೀಯ ವೈದ್ಯಕೀಯ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ರವಿವಾರ ಮಲ್ಪೆಪ್ಯಾರಡೈಸ್ ಹೋಟೇಲ್ ಸಭಾಂಗಣದಲ್ಲಿ ನೆರವೇರಿಸಿ ಅವರು ಮಾತನಾಡುತಿದ್ದರು.
ನೂತನ ಅಧ್ಯಕ್ಷ ಡಾ.ಗುರುಮೂರ್ತಿ ಭಟ್, ಕಾರ್ಯದರ್ಶಿ ಡಾ.ಕೃಷ್ಣಾನಂದ ಮಲ್ಯ ಮಾತನಾಡಿದರು. ನಿರ್ಗಮನ ಅಧ್ಯಕ್ಷ ಡಾ.ಸುದರ್ಶನ ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಡಾ.ರಾಜಲಕ್ಷ್ಮೀ ವಂದಿಸಿ ದರು. ಡಾ.ವತ್ಸಲಾ ರಾವ್ ಹಾಗೂ ಡಾ.ಆರತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
Next Story





