ಅ. 31: ಉಳ್ಳಾಲದಲ್ಲಿ ಸುನ್ನೀ ಆದರ್ಶ ಸಂಗಮ
ಮಂಗಳೂರು, ಅ. 30: ಆಕ್ಟಿವ್ ವಿಂಗ್ಸ್ ಉಳ್ಳಾಲ ಇದರ ವತಿಯಿಂದ 'ಸುನ್ನೀ ಆದರ್ಶ ಸಂಗಮ' ಅ. 31ರಂದು ಸಂಜೆ 6:30ಕ್ಕೆ ಉಳ್ಳಾಲ ಪೇಟೆ ನಗರಸಭಾ ಸಭಾಂಗಣದಲ್ಲಿ ನಡೆಯಲಿದೆ.
ಮುಖ್ಯ ಪ್ರಭಾಷಣಗಾರರಾಗಿ ದ.ಕ. ಜಿಲ್ಲಾ ಜಂ-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಟಿ.ಎಂ. ಮುಹ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ ಅಗಮಿಸಲಿದ್ದಾರೆ. ಅಬೂಝಿಯಾದ್ ಮದನಿ ಪಟ್ಟಾಂಭಿ ಉಸ್ತಾದ್ ಅಳೇಕಲ ದುಆ ಮೂಲಕ ಚಾಲನೆ ನೀಡಿ, ಎಸ್.ಎಂ.ಓ ಉಳ್ಳಾಲ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ಅಲ್-ಕಾಮಿಲ್ ಉದ್ಘಾಟಿಸಲಿದ್ದಾರೆ.
ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಅಧ್ಯಕ್ಷ ಸೆಯ್ಯಿದ್ ಜಲಾಲ್ ತಂಙಳ್ ಅಳೇಕಲ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಖಲಂದರ್ ಸಖಾಫಿ ಅಝಾದ್ ನಗರ, ಯೂನುಸ್ ಇಮ್ದಾದಿ ತೋಟ, ಶರೀಫ್ ಸಅದಿ ಸುಂದರ್ ಭಾಗ್ , ಸೆಯ್ಯಿದ್ ಖುಬೈಬ್ ತಂಙಳ್, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಮುಸ್ತಫಾ ಮಾಸ್ಟರ್ ಮುಕ್ಕಚ್ಚೇರಿ, ಜಾಫರ್ ಯು.ಎಸ್. ಅಳೇಕಲ ಸಹಿತ ಉಲಮಾ ಉಮರಾ ನೇತಾರರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





