ಬೆಳ್ತಂಗಡಿ: ಬಾಲಕ ನಾಪತ್ತೆ; ದೂರು ದಾಖಲು

ಬೆಳ್ತಂಗಡಿ, ಅ. 30: ಇಲ್ಲಿನ ಪಡಂಗಡಿ ಗ್ರಾಮದ ಹೈದರ್ ಎಂಬವರ ಪುತ್ರ ಮುಹಮ್ಮದ್ ಶಫೀಕ್ (15) ಮಂಗಳವಾರ ಬೆಳಗ್ಗಿನಿಂದ ಕಾಣೆಯಾದ ಬಗ್ಗೆ ವರದಿಯಾಗಿದೆ.
ಶಫೀಕ್ ಪಡಂಗಡಿ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಮದರಸದಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿದ್ದು ಇಂದು ಬೆಳಗ್ಗೆ ಮದರಸ ಬಿಟ್ಟು ಬಂದವನು ಶಾಲೆಗೆ ಹೋಗದೆ ನಾಪತ್ತೆಯಾಗಿದ್ದಾನೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಹೈದರ್ ಅವರ ಮೊಬೈಲ್ ಸಂಖ್ಯೆ 9901105484 ಅನ್ನು ಸಂಪರ್ಕಿಸಲು ಕೋರಲಾಗಿದೆ.
Next Story





