ಗಣರಾಜ್ಯ ದಿನಾಚರಣೆಯಲ್ಲಿ ಟ್ರಂಪ್ ಭಾಗವಹಿಸುವುದಿಲ್ಲ: ಶ್ವೇತಭವನ
ವಾಶಿಂಗ್ಟನ್, ಅ. 30: ಬೇರೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ, ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಲು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಆಹ್ವಾನವನ್ನು ಸ್ವೀಕರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಅಸಾಧ್ಯವಾಗಿದೆ ಎಂದು ಶ್ವೇತಭವನ ತಿಳಿಸಿದೆ.
ಆದರೆ, ಉಭಯ ನಾಯಕರು ‘ಗಾಢ ವೈಯಕ್ತಿಕ ಬಾಂಧವ್ಯ’ವನ್ನು ಹೊಂದಿದ್ದಾರೆ ಎಂದು ಅದು ಸ್ಪಷ್ಟಪಡಿಸಿದೆ.
ಆದರೆ, ಶ್ವೇತಭವನ ಹೆಚ್ಚಿನ ವಿವರಣೆಯನ್ನು ನೀಡಿಲ್ಲ.
ಮಾಜಿ ಅಧ್ಯಕ್ಷ ಬರಾಕ್ ಒಬಾಮ 2015ರಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದಾರೆ.
Next Story