‘ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ಉಡುಪಿ ಡಿಸಿ ಪರಿಶೀಲಿಸಿ ಕ್ರಮ’

ತ್ರಾಸಿ, ಅ.30: ಉಡುಪಿ ಶಾಸಕರ ನೇತೃತ್ವದಲ್ಲಿ ಮರಳು ಪರವಾನಿಗೆ ನೀಡುವಂತೆ ಒತ್ತಾಯಿಸಿ ನಡೆದಿರುವ ಧರಣಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಕುರಿತ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತ್ರಾಸಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು ಬಳಿಕ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿಯ ಕುಮಾರ ಬಂಗಾರಪ್ಪ ಮಿ ಟೂ ಸೇರಿದಂತೆ ತಮ್ಮ ವಿರುದ್ಧ ಮಾಡಿರುವ ಆರೋಪ ತೀರಾ ಕೀಳು ಮಟ್ಟದ್ದು ಎಂದು ಉತ್ತರಿಸಿದರು.
ಚುನಾವಣಾ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಹೆಸರನ್ನು ತಾವು ದುರ್ಬಳಕೆ ಮಾಡಿಕೊಂಡಿರುವುದಾಗಿ ಕುಮಾರ ಬಂಗಾರಪ್ಪ ಆರೋಪಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಅವರು ನಮ್ಮ ಪಕ್ಷದ ನಾಯಕರಾಗಿದ್ದರು. ಇಲ್ಲಿ ಸಂಸದರು,ಶಾಸಕರು ಆಗಿ ಕೆಲಸ ಮಾಡಿದ್ದು, ಈಗಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಅವರ ಸಾಧನೆಯನ್ನು ಹೇಳಿಕೊಳ್ಳುವುದು ಹೆಸರಿನ ದುರ್ಬಳಕೆಯಾಗುವುದೇ ಎಂಬ ತೀರ್ಮಾನವನ್ನು ಅವರಿಗೆ ಬಿಡುತ್ತೇನೆ. ಅವರ ಹೆಸರನ್ನು ನಾನು ಯಾಕೆ ದುರ್ಬಳಕೆ ಮಾಡಿಕೊಳ್ಳಲಿ ಎಂದರು.
ಮಧು ಬಂಗಾರಪ್ಪ ಅವರು ತನ್ನ ತಂದೆಯವರ ಸ್ಮಾರಕ ನಿರ್ಮಾಣಕ್ಕಾಗಿ ಸಕ್ರಿಯರಾಗಿ ದುಡಿಯುತಿದ್ದಾರೆ. ಅದಕ್ಕೆ ಕುಮಾರ ಬಂಗಾರಪ್ಪರ ಕೊಡುಗೆ ಏನಿದೆ ಎಂದು ಖಾರವಾಗಿ ಪ್ರಶ್ನಿಸಿದರು. ಮಿ ಟೂ ಆರೋಪದ ಕುರಿತು ಅದು ಅವರ ಕೀಳು ಅಭಿರುಚಿಯನ್ನು ಪ್ರದರ್ಶಿಸುತ್ತದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದುದರಿಂದ ಎಲ್ಲವನ್ನೂ ಧೈರ್ಯದಿಂದ ಎದುರಿಸಬಲ್ಲೆ ಎಂದರು.
ಮುಬಂಗಾರಪ್ಪಅವರುತನ್ನತಂದೆಯವರಸ್ಮಾರಕನಿರ್ಮಾಣಕ್ಕಾಗಿಸಕ್ರಿಯರಾಗಿದುಡಿಯುತಿದ್ದಾರೆ.ಅದಕ್ಕೆಕುಮಾರಬಂಗಾರಪ್ಪರಕೊಡುಗೆಏನಿದೆಎಂದುಖಾರವಾಗಿಪ್ರಶ್ನಿಸಿದರು.ಮಿಟೂಆರೋಪದಕುರಿತುಅದುಅವರಕೀಳುಅಭಿರುಚಿಯನ್ನುಪ್ರದರ್ಶಿಸುತ್ತದೆ.ನಾನುಯಾವುದೇತಪ್ಪುಮಾಡಿಲ್ಲ.ಆದುದರಿಂದಎಲ್ಲವನ್ನೂೈರ್ಯದಿಂದ ಎದುರಿಸಬಲ್ಲೆ ಎಂದರು. ಚುನಾವಣೆಯ ಸಂದರ್ಭದಲ್ಲಿ ವೈಯಕ್ತಿಕ ವಿಚಾರ ಚರ್ಚೆ ಮಾಡಲ್ಲ. ರಾಜಕೀಯ ವಿಚಾರಗಳಿದ್ದರೆ ಬನ್ನಿ ಚರ್ಚಿಸೋಣ. ಇಡೀ ಹೇಳಿಕೆಯಲ್ಲಿ ಕುಮಾರ ಬಂಗಾರಪ್ಪ ಅವರ ಕೀಳು ಅಭಿರುಚಿ ಪ್ರದರ್ಶನವಾಗಿದೆ ಎಂದು ಕುಮಾರಸ್ವಾಮಿ ನುಡಿದರು.
ಇದೇ ಮಾತನ್ನು ಅವರು ಸಿದ್ದರಾಮಯ್ಯ ಅವರ ಮಗನ ಸಾವಿನ ಕುರಿತು ಮಾತನಾಡಿದ ಜನಾರ್ದನ ರೆಡ್ಡಿ ಅವರ ಹೇಳಿಕೆ ಕುರಿತು ಉತ್ತರಿಸಿದರು. ಇದು ಜನಾರ್ದನ ರೆಡ್ಡಿ ಅವರ ಕೀಳು ಅಭಿರುಚಿ ತೋರಿಸುತ್ತದೆ ಎಂದರು. 5 ಕ್ಷೇತ್ರದಲ್ಲೂ ಗೆಲುವು: ರಾಜ್ಯದಲ್ಲಿ ಉಪಚುನಾವಣೆ ನಡೆಯುವ ಐದು ಕ್ಷೇತ್ರಗಳಲ್ಲೂ ನಾವು ಜಯಗಳಿಸುತ್ತೇವೆ ಎಂದು ನುಡಿದ ಅವರು ಈ ಚುನಾವಣೆ ಮುಂದಿನ ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪರಿಗೆ ಬಹುಮತ ನೀಡಲು ಉಭಯ ಪಕ್ಷಗಳ ನಾಯಕರು ಒಮ್ಮತದಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಾನೂ ಕೊನೆಯ ಹಂತದಲ್ಲಿ ಕಳೆದ ಮೂರು ದಿನಗಳಿಂದ ಶಿವಮೊಗ ಕ್ಷೇತ್ರದಲ್ಲಿ ಪ್ರಚಾರ ನಡೆಸುತಿದ್ದೇನೆ. ಇಲ್ಲಿ ನಮಗೆ ಗೆಲ್ಲುವ ಸಂಪೂರ್ಣ ಭರವಸೆ ಇದೆ ಎಂದರು.







