ಮೀನಿನ ಲಾರಿ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು
ಮಂಗಳೂರು, ಅ.30: ಕೋಟೆಕಾರ್ ಬೀರಿ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ರಾತ್ರಿ ಮೀನಿನ ಲಾರಿ ಢಿಕ್ಕಿ ಹೊಡೆದು ಪಾದಚಾರಿ ಬಗಂಬಿಲ ನಿತ್ಯಾನಂದ ನಗರದ ರಾಜೀವ್ (44) ಮೃತಪಟ್ಟಿದ್ದಾರೆ.
ರಾಜೀವ್ ಅವರು ಅಂಗಡಿಯಿಂದ ದಿನ ಬಳಕೆಯ ವಸ್ತುಗಳನ್ನು ಖರೀದಿಸಿ ಬೀರಿ ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ಮಂಗಳೂರಿನಿಂದ ತಲಪಾಡಿ ಕಡೆಗೆ ವೇಗವಾಗಿ ಸಾಗುತ್ತಿದ್ದ ಮೀನಿನ ಲಾರಿ ಢಿಕ್ಕಿ ಹೊಡೆದಿತ್ತು. ರಸ್ತೆಗೆ ಬಿದ್ದ ರಾಜೀವ್ ಅವರ ತಲೆಗೆ ತೀವ್ರ ಗಾಯ ಮತ್ತು ಎಡ ಕಾಲಿನ ಮೂಳೆ ಮುರಿತ ಉಂಟಾಗಿತ್ತು. ಅವರನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಲಕಾರಿಯಾಗದೆ ಮಂಗಳವಾರ ಬೆಳಗ್ಗೆ 6:45ಕ್ಕೆ ಅವರು ಸಾವನ್ನಪ್ಪಿದರು.
ಈ ಕುರಿತು ನಗರ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





