ಬೆಂಗಳೂರು: ಎಸ್.ವೈ.ಎಸ್ ವತಿಯಿಂದ ಫ್ಯಾಮಿಲಿ ಮೀಟ್

ಬೆಂಗಳೂರು,ಅ.30: ಎಸ್.ವೈ.ಎಸ್ ಬೆಂಗಳೂರು ಜಿಲ್ಲಾ ಸಮಿತಿಯು ಹಮ್ಮಿಕೊಂಡಿರುವ ಮಹ್ಲರತುಲ್ ಬದ್ರಿಯ್ಯ ವಾರ್ಷಿಕ ಸಮ್ಮೇಳನವು ನವೆಂಬರ್ 2 ಶುಕ್ರವಾರ ಹಝ್ರತ್ ತವಕ್ಕಲ್ ಮಸ್ತಾನ್ ವಠಾರದಲ್ಲಿ ನಡೆಯಲಿದ್ದು, ಇದರ ಪ್ರಯುಕ್ತ ಶಿವಾಜಿ ನಗರ ದಾರುಸ್ಸಲಾಂ ಸಭಾಂಗಣದಲ್ಲಿ ಫ್ಯಾಮಿಲಿ ಮೀಟ್ ಕಾರ್ಯಕ್ರಮ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಎಸ್.ವೈ.ಎಸ್ ಜಿಲ್ಲಾ ಅಧ್ಯಕ್ಷ ಬಶೀರ್ ಅಫ್ಲಲಿ ಸಅದಿಯರು ವಹಿಸಿದ್ದರು. ಫ್ಯಾಮಿಲಿ ಟ್ರೈನರ್ ಹಂಸ ಅಂಜಿಮುಕ್ಕ್ ರವರು ಮನೆಯಲ್ಲಿರುವ ಮಕ್ಕಳ ಬೆಳೆಸುವಿಕೆ, ಪೋಷಕರಿಗೆ ಗೈಡನ್ಸ್, ಸೋಷಿಯಲ್ ಮೀಡಿಯಾ ದುರುಪಯೋಗ ಮುಂತಾದ ವಿಷಯಗಳ ಬಗ್ಗೆ ಸಮಗ್ರವಾಗಿ ವಿಷಯ ಮಂಡನೆ ನಡೆಸಿದರು. ಬೆಂಗಳೂರಿನ ವಿವಿಧ ಕಡೆಗಳಿಂದ ಇನ್ನೂರರಷ್ಟು ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಮುಜೀಬ್ ಸಖಾಫಿ ಸ್ವಾಗತಿಸಿ, ಕಾರ್ಯದರ್ಶಿ ಇಬ್ರಾಹಿಮ್ ಸಖಾಫಿ ವಂದಿಸಿದರು.
Next Story





