ನ.1: ಎಸ್ಕೆಎಸೆಸ್ಸೆಫ್ ವತಿಯಿಂದ ಮಾದಕ ದ್ರವ್ಯಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ
ಮಂಗಳೂರು, ಅ. 30: ಎಸ್ಕೆಎಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ "ನೆಮ್ಮದಿಯ ಕರ್ನಾಟಕಕ್ಕೆ ಯುವ ಜಾಗೃತಿ" ವಾಕ್ಯದಡಿಯಲ್ಲಿ ಕ್ಲಷ್ಟರ್ ಮಟ್ಟದಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಪ್ರತಿಜ್ಞಾ ಸ್ವೀಕಾರ, ಕರಪತ್ರ ವಿತರಣೆ, ಜಾಗೃತಿ ಸಮಾವೇಶ ಮುಂತಾದ ಕಾರ್ಯಕ್ರಮ ನಡೆಯಲಿದೆ ಎಂದು ಎಸ್ಕೆಎಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





