ಪರೀಕ್ಷೆಯಲ್ಲಿ 100ರಲ್ಲಿ 98 ಅಂಕ ಗಳಿಸಿ ಎಲ್ಲರ ಹುಬ್ಬೇರಿಸಿದ 96 ವರ್ಷದ ವೃದ್ಧೆ

ಹೊಸದಿಲ್ಲಿ, ಅ.31: ಕೇರಳದ ಸಾಕ್ಷರತ ಕಾರ್ಯಕ್ರಮದ ಪರೀಕ್ಷೆಯೊಂದರಲ್ಲಿ 96 ವರ್ಷದ ವೃದ್ಧೆಯೊಬ್ಬರು 98 ಅಂಕಗಳನ್ನು ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಈ ಕಾರ್ಯಕ್ರಮದಡಿ ಪರೀಕ್ಷೆ ಬರೆದ ಅತೀ ಹಿರಿಯ ವ್ಯಕ್ತಿ ಇವರಾಗಿದ್ದಾರೆ.
“ಕೇರಳ ರಾಜ್ಯ ಸಾಕ್ಷರತಾ ಮಿಷನ್ ನ ‘ಅಕ್ಷರಲಕ್ಷಂ’ ಪರೀಕ್ಷೆಯನ್ನು ಆಲಪ್ಪುಳ ಜಿಲ್ಲೆಯ ಕಾರ್ತಿಯಾನಿ ಅಮ್ಮ ಬರೆದಿದ್ದರು. ಅವರ ಓದು, ಬರಹ, ಸಾಮಾನ್ಯ ಗಣಿತವನ್ನು ಪರೀಕ್ಷಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಈ ಬಾರಿ 42,933 ಮಂದಿ ಉತ್ತೀರ್ಣರಾಗಿದ್ದು, ಈ ಮೂಲಕ ಸಂಪೂರ್ಣ ಸಾಕ್ಷರ ರಾಜ್ಯವಾಗುವತ್ತ ಕೇರಳ ಮುಂದಡಿಯಿಟ್ಟಿದೆ.
Next Story





