ಅಪಹರಿಸಿ ಹಣಕ್ಕೆ ಬೇಡಿಕೆ: ಬಂಧನ
ಬೆಂಗಳೂರು, ಅ.31: ವ್ಯಾಪಾರಿಯೊಬ್ಬರನ್ನು ಅಪಹರಿಸಿ 3 ಲಕ್ಷ ರೂ. ಗಳಿಗೆ ಬೇಡಿಕೆಯಿಟ್ಟಿದ್ದ ಆರೋಪದಡಿ ರೌಡಿಶೀಟರ್ ಮಂಜುನಾಥ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜಯನಗರದ ರಾಮು ಎಂಬಾತನು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧಿತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಟಿ ಮಾರುಕಟ್ಟೆಯ ಮಾಮೂಲ್ ಪೇಟೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನ್ನು ಗಮನಿಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವ್ಯಾಪಾರಿ ಕೈಲಾಶ್ ಜೈನ್ ಅವರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಆರೋಪಿ ರೌಡಿ ಮಂಜುನಾಥ್, ಜಯನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ಮತ್ತೊಬ್ಬ ಆರೋಪಿ ರಾಮು ಜತೆ ಸೇರಿ ಕಳೆದ ಅ.25 ರಂದು ಸಿಟಿ ಮಾರುಕಟ್ಟೆಯ ವ್ಯಾಪಾರಿ ಕೈಲಾಶ್ ಜೈನ್ ಎಂಬುವರನ್ನು ಅಪಹರಿಸಿದ್ದರು. ಜೈನ್ ಅವರನ್ನು ಕೂಡಿ ಹಾಕಿ 3 ಲಕ್ಷ ರೂ. ಹಣಕ್ಕೆ ಒತ್ತಾಯ ಮಾಡಿ ನಂತರ ಬಿಡುಗಡೆ ಮಾಡಿದ್ದು, ಈ ಸಂಬಂಧ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಗಿರೀಶ್ ಹೇಳಿದ್ದಾರೆ.





