ಉಡುಪಿ: ಹಜ್ ಯಾತ್ರಾರ್ಥಿಗಳಿಗೆ ಫಾರಂ ಬಿಡುಗಡೆ

ಉಡುಪಿ, ಅ.31: ಈ ಸಾಲಿನ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿ ಗಳಿಗಾಗಿ ಹಜ್ ಫಾರಂಗಳ ಬಿಡುಗಡೆ ಸಮಾರಂಭವು ಅ.31ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಚೇರಿಯಲ್ಲಿ ನಡೆಯಿತು.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ ಫಾರಂ ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯ ರುಗಳಾದ ಅಬ್ದುಲ್ ಖಾದರ್ ಆತ್ರಾಡಿ, ಸಂಶುದ್ದೀನ್, ಟಿ.ಹುಸೇನ್ ಸಾಹೇಬ್, ಹಾಜಿ ಅಬೂಬಕ್ಕರ್, ವಕ್ಫ್ ಅಧಿಕಾರಿಗಳಾದ ಮುಜಾಹಿದ್ ಪಾಶ, ನಾಝಿಯ ಮೊದಲಾದವರು ಉಪಸ್ಥಿತರಿದ್ದರು.
ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು. ಗ್ರೀನ್ ವಿಭಾಗಕ್ಕೆ ಒಟ್ಟು 2,76,843ರೂ., ಆಝೀಝ ವಿಭಾಗಕ್ಕೆ 2,42,079ರೂ. ಆಗಿದೆ. ಅರ್ಜಿ ಸಲ್ಲಿಸಲು ನ.17 ಕೊನೆಯ ದಿನಾಂಕವಾಗಿದೆ. ಪಾಸ್‌ಪೋರ್ಟ್ ಅವಧಿಯು 2020ರ ಜ.31 ಆಗಿರಬೇಕು. ಒಂದು ಕವರಿನಲ್ಲಿ ಐದು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಜ್ ಸಮಿತಿಯ ವೆಬ್‌ಸೈಟ್ -hajcommitee.gov.in- ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.







