ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಯಿಂದ ಭ್ರಷ್ಟತೆಯ ವಿರೋಧ ಪ್ರತಿಜ್ಞೆ
ಮಂಗಳೂರು, ಅ.31: ನಗರದ ಕೃಷಿ ವಿಜ್ಞಾನ ಕೇಂದ್ರವು ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ ನಿರ್ದೇಶನದ ಮೇರೆಗೆ ‘ನವ ಭಾರತ ನಿರ್ಮಾಣ ಮಾಡಲು ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಅವಶ್ಯಕ’ ಎಂಬ ಮೂಲ ತತ್ವದೊಂದಿಗೆ ಜಾಗರೂಕತೆಯ ಅರಿವು ಪರಿವೀಕ್ಷಣಾ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ತಾಂತ್ರಿಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭ್ರಷ್ಟತೆಯ ವಿರೋಧ ಪ್ರತಿಜ್ಞೆ ಮಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಸ್ಥೆಯ ಬೇಸಾಯ ಶಾಸ್ತ್ರದ ವಿಜ್ಞಾನಿ ಹರೀಷ್ ಶೆಣೈ, ಕಾರ್ಯಕ್ರಮ ಸಹಾಯಕ ಸತೀಶ್ ನಾಯಕ್, ಸಿಬ್ಬಂದಿ ವರ್ಗದವರಾದ ಯಶಶ್ರೀ, ಕೇಶವ, ಸೋಮಶೇಖರ ಅಯ್ಯ, ಅಶ್ವಿತ್ ಕುಮಾರ್, ಸೀತಾರಾಮ ಎಂ., ವಿದ್ಯಾವತಿ, ಶಾಂಭವಿ, ಕಸ್ತೂರಿ, ಕಮಲ, ಸದಾಶಿವ, ದಾಮೋದರ, ಆಶಾಲತಾ ಮತ್ತು ವಿನೋದ ಸಪ್ತಾಹದಲ್ಲಿ ಪಾಲ್ಗೊಂಡು ಪ್ರತಿಜ್ಞೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಎ.ಟಿ. ರಾಮಚಂದ್ರ ನಾಯ್ಕ, ಜೀವನದ ಎಲ್ಲ ಹಂತಗಳಲ್ಲಿ ಸಂಭಾವ್ಯತೆ ಮತ್ತು ನಿಯಮಗಳನ್ನು ಅನುಸರಿಸಲು, ಲಂಚ ತೆಗೆದುಕೊಳ್ಳಲು ಅಥವಾ ಕೊಡುವುದಿಲ್ಲ ಮತ್ತು ಕಾರ್ಯವೃತ್ತಿಯನ್ನು ಪಾರದರ್ಶಕದಂತೆ ನಿರ್ವಹಿಸಲು ನಾವೆಲ್ಲರೂ ಸದಾ ಸಿದ್ದರಿರಬೇಕು ಎಂದು ವಾಚಿಸಿದರು.
ಸಾರ್ವಜನಿಕ ಹಿತಾಶಕ್ತಿಗೆ ವರ್ತಿಸಲು ವೈಯಕ್ತಿಕ ನಡವಳಿಯಲ್ಲಿ ಸಮಗ್ರತೆ ಪ್ರದರ್ಶಿಸುವ ಮೂಲಕ ಮುನ್ನಡೆಸುವುದು, ಭ್ರಷ್ಟಾಚಾರದ ಯಾವುದೇ ಘಟನೆಯನ್ನು ಸರಿಯಾದ ಸಂಸ್ಥೆಗೆ ವರದಿ ಮಾಡಲು ಸೂಚನೆ ನೀಡುವುದರ ಮೂಲಕ ಸಿಬ್ಬಂದಿ ಒಕ್ಕೊರಲಿನಿಂದ ಕೈಜೋಡಿಸಿ ಪ್ರತಿಜ್ಞೆ ಮಾಡಿದರು.







