ಪೋಕ್ಸೋ ಪ್ರಕರಣ: ಹೆಜಮಾಡಿ ವಿಎಗೆ ಜಾಮೀನು
ಉಡುಪಿ, ಅ.31: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಹೆಜಮಾಡಿ ಗ್ರಾಪಂನ ಗ್ರಾಮ ಲೆಕ್ಕಿಗ ಕುಮಾರ ಸ್ವಾಮಿ ಎಂಬಾತನಿಗೆ ಉಡುಪಿ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಆಸ್ತಿಯ ವಿಚಾರವಾಗಿ ಸಂಬಂಧಿಗಳೊಂದಿಗೆ ಗ್ರಾಪಂ ಕಚೇರಿಗೆ ಬಂದ ಬಾಲಕಿಯ ಮೊಬೈಲ್ ನಂಬರ್ ಪಡೆದ ಆರೋಪಿ, ಬಳಿಕ ಆಕೆಯ ಜೊತೆ ಮೊಬೈಲ್ ಫೋನ್‌ನಲ್ಲಿ ಸಂಪರ್ಕ ಹೊಂದಿದ್ದನು. ಆಕೆಗೆ ಸಂದೇಶ ಹಾಗೂ ವಾಟ್ಸಾಪ್ ಮಾಡುತ್ತಿದ್ದ ಆರೋಪಿ, ಅಶ್ಲೀಲ ಫೋಟೋ ಕಳುಹಿಸುವಂತೆ ಒತ್ತಾಯಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿವಾಹಿತನಾಗಿರುವ ಆರೋಪಿಗೆ ಒಂದು ತಿಂಗಳ ಮಗು ಇದೆ. ಬಾಲಕಿ ನೀಡಿದ ದೂರಿನಂತೆ ಆರೋಪಿ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆ ಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕಾ ಆರೋಪಿ ಶರ್ತಬದ್ಧ ಜಾಮೀನು ನೀಡಿ ಬಿಡುಗಡೆಗೊಳಿ ಸಿದರು. ಆರೋಪಿ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.





