ಶಬರಿಮಲೆ: ಮರು ಪರಿಶೀಲನಾ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

ಹೊಸದಿಲ್ಲಿ, ಅ. 31: ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಲು ಅವಕಾಶ ನೀಡುವ ತೀರ್ಪನ್ನು ಮರು ಪರಿಶೀಲನಾ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೊರ್ಟ್ ಬುಧವಾರ ನಿರಾಕರಿಸಿದೆ.
ನವೆಂಬರ್ 5 ಹಾಗೂ 6ರಂದು ದೇವಾಲಯ 24 ಗಂಟೆಗಳ ಕಾಲವೂ ತೆರೆದಿರಲಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಪುನರ್ ಪರಿಶೀಲನಾ ಮನವಿಯನ್ನು ನವೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ದೇವಾಲಯ ಪ್ರವೇಶಿಸಲು ಪ್ರಯತ್ನಿಸಿದ 10ರಿಂದ 50 ವರ್ಷಗಳ ಒಳಗಿನ 12ಕ್ಕೂ ಅಧಿಕ ಮಹಿಳೆಯರಿಗೆ ಪ್ರತಿಭಟನೆ ನಡೆಸುತ್ತಿದ್ದ ಭಕ್ತರು ತಡೆ ಒಡ್ಡುವ ಮೂಲಕ ದೇವಾಲಯ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿತ್ತು.
Next Story





