ಗ್ರಾಹಕರಿಗೆ ನಾಳೆ ಕಾದಿದೆ ಶಾಕ್: ಮತ್ತೆ ಏರಿಕೆಯಾಗಲಿದೆ ಎಲ್ ಪಿಜಿ ದರ

ಮಂಗಳೂರು, ಅ.31: ಈಗಾಗಲೇ ಬೆಲೆಯೇರಿಕೆಯ ಬಿಸಿಯಿಂದ ಕಂಗೆಟ್ಟಿರುವ ಜನರಿಗೆ ಎಲ್ ಪಿಜಿ ಬೆಲೆ ಇನ್ನಷ್ಟು ಕೈ ಸುಡಲಿದೆ ಎನ್ನಲಾಗುತ್ತಿದೆ. ಏಕೆಂದರೆ ಈಗಾಗಲೇ 800ರ ಗಡಿ ದಾಟಿರುವ ಸಬ್ಸಿಡಿರಹಿತ ಅಡುಗೆ ಅನಿಲ ದರ ನಾಳೆಯಿಂದ (ನವೆಂಬರ್ 1) 910 ರೂ.ಗಳ ಗಡಿ ದಾಟಲಿದೆ ಎಂದು ತಿಳಿದುಬಂದಿದೆ.
ಕಳೆದ ಬಾರಿಯ ಬೆಲೆಯೇರಿಕೆಯ ನಂತರ 14.2 ಕೆ.ಜಿ. ಎಲ್ ಪಿಜಿ ಸಿಲಿಂಡರೊಂದರ ಬೆಲೆ 858 ರೂ. ಆಗಿತ್ತು. ಇದೀಗ ನಾಳೆಯಿಂದ ಅನ್ವಯವಾಗಲಿರುವ ಪರಿಷ್ಕೃತ ದರ 910 ರೂ.ಗಳ ಗಡಿ ದಾಟಲಿದೆ ತಿಳಿದುಬಂದಿದೆ.
ಇದರೊಂದಿಗೆ 19 ಕೆ.ಜಿ. ಎಲ್ ಪಿಜಿ ದರವೂ ಏರಿಕೆಯಾಗಲಿದ್ದು, ಈಗ ಇರುವ 1,488 ರೂ.ಗಳಿಂದ 1,550 ರೂ.ಗಳಿಗಿಂತಲೂ ಹೆಚ್ಚಲಿದೆ. ಈ ಮೂಲಕ 14.2 ಕೆಜಿ ಸಿಲಿಂಡರ್ ಬೆಲೆ 60 ರೂ. ಮತ್ತು 19 ಕೆ.ಜಿ. ಸಿಲಿಂಡರ್ ಬೆಲೆ 90 ರೂ.ಗಳಷ್ಟು ಹೆಚ್ಚಲಿದೆ ಎಂದು ತಿಳಿದುಬಂದಿದೆ.
Next Story





