ಅಫ್ಘಾನ್ ನಲ್ಲಿ ಸೇನಾ ವಿಮಾನ ಪತನ; 25 ಸಾವು
ಹೆರಾತ್ (ಅಫ್ಘಾನಿಸ್ತಾನ), ಅ. 31: 25 ಮಂದಿಯನ್ನು ಸಾಗಿಸುತ್ತಿದ್ದ ಅಫ್ಘಾನಿಸ್ತಾನದ ಸೇನಾ ಹೆಲಿಕಾಪ್ಟರೊಂದು ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಬುಧವಾರ ಪತನಗೊಂಡಿದೆ.
ಹೆಲಿಕಾಪ್ಟರ್ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅನಾರ್ ದಾರ ಜಿಲ್ಲೆಯಲ್ಲಿ ಕೆಟ್ಟ ಹವಾಮಾನದಿಂದಾಗಿ ಹೆಲೆಕಾಪ್ಟರ್ ಪತನಗೊಂಡಿತು ಎಂದು ಫರಾ ಪ್ರಾಂತೀಯ ಗವರ್ನರ್ರ ವಕ್ತಾರರೊಬ್ಬರು ತಿಳಿಸಿದರು.
ಅದೇ ವೇಳೆ, ಸೇನಾ ಹೆಲಕಾಪ್ಟರನ್ನು ತಾನು ಹೊಡೆದುರುಳಿಸಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.
ವಿಮಾನದಲ್ಲಿ ಇಬ್ಬರು ಪೈಲಟ್ಗಳು ಮತ್ತು 23 ಪ್ರಯಾಣಿಕರಿದ್ದರು.
ಪಶ್ಚಿಮ ಅಫ್ಘಾನಿಸ್ತಾನದ ಡೆಪ್ಯುಟಿ ಕಾರ್ಪ್ಸ್ ಕಮಾಂಡರ್ ಮತ್ತು ಫರಾ ಪ್ರಾಂತೀಯ ಮಂಡಳಿಯ ಮುಖ್ಯಸ್ಥರು ಮೃತರಲ್ಲಿ ಸೇರಿದ್ದಾರೆ.
Next Story