ನ. 2ರಿಂದ 'ಕರ್ನಾಟಕ ಯುರೋಲಜಿ ಅಸೋಸಿಯೇಷನ್' ವಾರ್ಷಿಕ ಸಮ್ಮೇಳನ
ಮಂಗಳೂರು, ಅ. 31: ಕರ್ನಾಟಕ ಯುರೋಲಜಿ ಅಸೋಸಿಯೇಷನ್ ನ ರಾಜ್ಯಮಟ್ಟದ 23ನೇ ವಾರ್ಷಿಕ ಸಮ್ಮೇಳನವು ಮಂಗಳೂರಿನ ಎ.ಜೆ.ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ನ. 2, 3 ಮತ್ತು 4 ರಂದು ನಡೆಯಲಿದೆ.
ಈ ಸಮ್ಮೇಳನವನ್ನು ಎ.ಜೆ.ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಯುರೋಲಜಿ, ಅಂಡ್ರೋಲಜಿ ಮತ್ತು ಕಿಡ್ನಿ ಕಸಿ ವಿಭಾಗ ಹಾಗೂ ಮಂಗಳೂರು ಯುರೋಲಜಿ ಪೋರಂ ಜಂಟಿಯಾಗಿ ಆಯೋಜಿಸಿದೆ. ಈ ಸಮ್ಮೇಳನಕ್ಕೆ ಮುಂಚಿತವಾಗಿ ಎ.ಜೆ. ಆಸ್ಪ್ರತ್ರೆಯಿಂದ ಯುರೇತ್ರಲ್ ರಿ ಕನ್ ಸ್ಟಕ್ಶನ್ ಫಾರ್ ಸ್ಟ್ರಿಕ್ಚರ್ ಡಿಸೀಸ್ ಎಂಬ ವಿಷಯದಲ್ಲಿ ನೇರ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಅಲ್ಲದೆ, ದೇಶದ ಇತರ ಭಾಗಗಳಿಂದಲೂ ವೈದ್ಯಕೀಯ ಪ್ರತಿನಿಧಿಗಳು ಭಾಗವಹಿಸಲಿರುವರು. ಮುಂಬೈ ಹಾಗೂ ದೆಹಲಿಯ ಪ್ರತಿಷ್ಟಿತ ವೈದ್ಯರು ಈ ಸಮ್ಮೇಳನದಲ್ಲಿ ಉಪನ್ಯಾಸ ನೀಡಲಿದ್ದಾರೆ.
ನ. 3 ರಂದು ಕರ್ನಾಟಕದ ಲೋಕಾಯುಕ್ತರಾದ ಜಸ್ಟೀಸ್ ಪಿ. ವಿಶ್ವನಾಥ ಶೆಟ್ಟಿ ಅವರು ಉದ್ಘಾಟಿಸುವರು. ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಚೆಯರ್ ಮ್ಯಾನ್ ಡಾ. ಎ.ಜೆ. ಶೆಟ್ಟಿ, ಎ.ಜೆ.ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಅಶೋಕ್ ಹೆಗ್ಡೆ, ಕರ್ನಾಟಕ ಯುರೋಲಜಿ ಅಸೋಸಿಯೇಷನ್ ನ ಅಧ್ಯಕ್ಷ ಡಾ. ಎಸ್.ಬಿ.ಪಾಟೀಲ್, ಮಂಗಳೂರು ಯುರೋಲಜಿ ಪೋರಂ ನ ಅಧ್ಯಕ್ಷ ಡಾ. ಮುಜೀಬ್ ರಹ್ಮಾನ್ ಹಾಗೂ ಕರ್ನಾಟಕ ಯುರೋಲಜಿ ಅಸೋಸಿಯೇಷನ್ ಕಾರ್ಯದರ್ಶಿ ಡಾ. ನಿಶ್ಚಿತ್ ಡಿಸೋಜ ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.







