ಪುಣೇರಿ, ಬೆಂಗಳೂರಿಗೆ ಜಯ
ಪಾಟ್ನಾ, ಅ.31: ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಜಯಭೇರಿ ಬಾರಿಸಿವೆ. ಪುಣೇರಿ ತಂಡ ದಿಲ್ಲಿ ದಬಾಂಗ್ ತಂಡವನ್ನು 31-27 ಅಂತರದಿಂದ ಮಣಿಸಿತು. ಪುಣೆ ಪರ ಸಂದೀಪ್ ನರ್ವಾಲ್ ಹಾಗೂ ರಿಂಕು ನರ್ವಾಲ್ ತಲಾ 4 ಅಂಕ ಗಳಿಸಿ ತಮ್ಮ ತಂಡಕ್ಕೆ ಆರನೇ ಗೆಲುವು ತಂದರು. ದಿಲ್ಲಿ ಪರ ನವೀನ್ ಕುಮಾರ್ 7 ಅಂಕ ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ತಂಡ ಆತಿಥೇಯ ಪಾಟ್ನಾ ಪೈರೇಟ್ಸ್ ತಂಡವನ್ನು 43-41 ಅಂತರದಿಂದ ರೋಚಕವಾಗಿ ಮಣಿಸಿತು. 15 ಅಂಕ ಗಳಿಸಿದ ಪವನ್‌ಕುಮಾರ್ ಬೆಂಗಳೂರಿನ ಗೆಲುವಿಗೆ ನೆರವಾದರು. ಕಾಶಿಲಿಂಗ 11 ಅಂಕ ಗಳಿಸಿ ಕುಮಾರ್‌ಗೆ ಸಾಥ್ ನೀಡಿದರು.
ಲೀಗ್‌ನಲ್ಲಿ ಆಡಿದ ತನ್ನ 5ನೇ ಪಂದ್ಯದಲ್ಲಿ 4ನೇ ಜಯ ದಾಖಲಿಸಿ ಒಟ್ಟು 21 ಅಂಕ ಗಳಿಸಿದ ಬೆಂಗಳೂರು ಬಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ. ಪಾಟ್ನಾ ತಂಡ ತಾನಾಡಿದ 9ನೇ ಪಂದ್ಯದಲ್ಲಿ 6ನೇ ಸೋಲು ಕಂಡಿದೆ.
Next Story





