ಕತರ್ ಏರ್ ವೇಸ್ ವಿಮಾನಕ್ಕೆ ಢಿಕ್ಕಿ ಹೊಡೆದ ನೀರಿನ ಟ್ರಕ್

ಕೊಲ್ಕತ್ತಾ, ನ.1: ಇಲ್ಲಿನ ವಿಮಾನ ನಿಲ್ದಾಣದಲ್ಲಿ ನೀರಿನ ಟ್ರಕ್ ಒಂದು ಕತರ್ ಏರ್ ವೇಸ್ ವಿಮಾನಕ್ಕೆ ಢಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ಸಂಭವಿಸಿದ್ದು, ವಿಮಾನಕ್ಕೆ ಹಾನಿಯಾಗಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೊಲ್ಕತ್ತಾದಿಂದ ದೋಹಾಕ್ಕೆ ತೆರಳಲಿದ್ದ ಕತರ್ ಏರ್ ವೇಸ್ ವಿಮಾನ ಕ್ಯು ಆರ್ 541ನಲ್ಲಿ 103 ಪ್ರಯಾಣಿಕರಿದ್ದರು. ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ವಿಮಾನದ ಮಧ್ಯಭಾಗಕ್ಕೆ ಹಾನಿಯಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.
Next Story





