ಬೆಳ್ಳಾರೆ: ಎಸ್.ಡಿ.ಪಿ.ಐ.ಯಿಂದ ಕನ್ನಡ ರಾಜ್ಯೋತ್ಸವ

ವಿಟ್ಲ, ನ.1: ಬೆಳ್ಳಾರೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ.) ಬೆಳ್ಳಾರೆ ವಲಯದ ವತಿಯಿಂದ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗುರುವಾರ ಬೆಳಗ್ಗೆ ಬೆಳ್ಳಾರೆ ಜಂಕ್ಷನ್ನಲ್ಲಿ ಆಚರಿಸಲಾಯಿತು.
ಎಸ್.ಡಿ.ಪಿ.ಐ. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಹಾಜಿ.ಕೆ ಮಮ್ಮಾಲಿ ದ್ವಜಾರೋಹಣಗೈದರು. ಕನ್ನಡ ರಾಜ್ಯೋತ್ಸವದ ಬಗ್ಗೆ ಎಸ್.ಡಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ಎಸ್.ಡಿ.ಪಿ.ಐ. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯ ಬಶೀರ್ ಬಿ.ಎ., ವಲಯಾಧ್ಯಕ್ಷ ಫೈಝಲ್ ಜಿ., ವಲಯ ಕಾರ್ಯದರ್ಶಿ ಹಮೀದ್ ಮರಕಡ,ಉಪಾಧ್ಯಕ್ಷ ಆಶೀರ್ ಎ.ಬಿ., ಸಮಿತಿಯ ಸದಸ್ಯರಾದ ಶಹೀದ್, ಸಿದ್ದೀಕ್, ಝೈನುದ್ದೀನ್ ಯು.ಎಚ್., ಶಾಫಿ ಟಿ. ಮತ್ತಿತರರು ಉಪಸ್ಥಿತರಿದ್ದರು. ಫೈಝಲ್ ಜಿ. ಸ್ವಾಗತಿಸಿದರು. ಬಶೀರ್ ಕೆ.ಎ. ವಂದಿಸಿದರು.
Next Story





