ನ.2ರಿಂದ ಇಂಡಿಯನ್ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸಿಬಿಷನ್
ಮಂಗಳೂರು, ನ.1: ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸಿಬಿಷನ್ ನ.2,3,4ರವರೆಗೆ ನಗರದ ನವಭಾರತ ಸರ್ಕಲ್ ಬಳಿಯಿರುವ ಟಿ.ವಿ. ರಮಣ ಪೈ ಕನ್ವೆನ್ ಶನ್ ಸೆಂಟರ್‌ನಲ್ಲಿ ನಡೆಯಲಿದೆ.
ನ. 2ರ ಸಂಜೆ 4 ಗಂಟೆಗೆ ಶಾಸಕ ವೇದವ್ಯಾಸ ಕಾಮತ್ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಐಐಟಿಇ ವತಿಯಿಂದ ಏರ್ಪಡಿಸಲಾಗಿರುವ ಈ ಎಕ್ಸಿಬಿಷನ್‌ನಲ್ಲಿ ಸಾರಿಗೆ, ಪ್ರವಾಸ, ರೈಲ್ವೇಸ್, ಆತಿಥ್ಯ ಮತ್ತಿತರ ಪೂರಕವಾದ ಸಂಗತಿಗಳ ಬಗ್ಗೆ ಜನರಿಗೆ ಪರಿಚಯಿಸಲಾಗುತ್ತದೆ. ಈ ಪ್ರವಾಸಿ ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರವಾಸಿ ಕೇಂದ್ರಗಳು, ಹೊಟೇಲ್‌ಗಳು, ರಿಸೋರ್ಟ್‌ಗಳು ಹಾಗೂ ಇನ್ನಿತರ ಸೇವೆಗಳು, ಪ್ರವಾಸದ ಸಂಯೋಜಕರು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸೇವೆಗಳನ್ನು ಪೂರೈಸುವವರ ಕುರಿತಾದ ವಿಸ್ತೃತ ಮಾಹಿತಿ ಒದಗಿಸಲಾಗುತ್ತದೆ.
ಜಾರ್ಕಂಡ್, ಬೆಂಗಾಲ್, ಗುಜರಾತ್, ಹಿಮಾಚಲ ಮತ್ತು ತೆಲಂಗಾನ ಪ್ರವಾಸೋದ್ಯಮವಲ್ಲದೆ ಒಮನ್ ಮತ್ತು ದುಬೈಯ ಡಿಎಂಸಿಗಳು ಪಾಲ್ಗೊಳ್ಳುತ್ತಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮಗಳು ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಗಳು ಈ ಪ್ರದರ್ಶನದಲ್ಲಿ ಪ್ರಸ್ತುತಗೊಳ್ಳಲಿದೆ.
ಅಪ್ನ ಹಾಲಿಡೇಸ್, ಬಿಐಟಿ ಟ್ರಾವೆಲ್ಸ್, ನಿರ್ಮಲ ಟ್ರಾವೆಲ್ಸ್, ವಿಕ್ರಮ್ ಟ್ರಾವೆಲ್ಸ್, ವೀಣಾ ವರ್ಲ್ಡ್, ಮಾಝಾಯ್ ಟೂರ್ಸ್ ಅಲ್ಲದೆ ಕಂಟ್ರಿ ಇನ್‌ನಂತಹ ಹೊಟೇಲ್‌ಗಳು ಯೆಲ್ಲೊ ಬ್ಯಾಂಬೊನಂತಹ ರೆಸೋರ್ಟ್‌ಗಳು, ಅವರ ಪ್ಯಾಕೇಜ್‌ಗಳು, ಸರ್ವಿಸ್ ಮತ್ತಿತರ ಸೇವೆಗಳ ಮಾತಿ ಒದಗಿಸಲಿದ್ದಾರೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಈ ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ. ಕ್ರಿಸ್‌ಮಸ್ ಸಂಭ್ರಮ, ವಾರದ ಪ್ರವಾಸ, ಹನಿಮೂನ್ ವೆಕೇಷನ್ ಮತ್ತು ಬಿಸಿನೆಸ್ ಟೂರುಗಳನ್ನು ನಡೆಸಲು ಚಳಿಗಾಲವು ಪ್ರಶಸ್ತವಾಗಿದೆ. ಹಾಗಾಗಿ ಇಲ್ಲಿಂದ ಪೂರಕ ಮಾಹಿತಿ ಪಡೆಯಬಹುದಾಗಿದೆ.
ವಿವಿಧ ಅತ್ಯಾಕರ್ಷಣೀಯ ಪ್ರವಾಸೋದ್ಯಮ ಪ್ಯಾಕೇಜ್‌ಗಳಿದೆ.ರಾಜ್ಯದ ಎಲ್ಲಾ ಜನರಿಗೂ ಇದರ ಪ್ರಯೋಜನ ಪಡೆಯಬಹುದಾಗಿದೆ. ಪ್ರತಿ ದಿನ ಪೂ.11 ರಿಂದ ರಾತ್ರಿ 7:30ರವರೆಗೆ ಪ್ರದರ್ಶನ ತೆರೆದುಕೊಂಡಿದ್ದು, ಪ್ರವೇಶ ಉಚಿತವಾಗಿರುತ್ತದೆ ಎಂದು ಐಐಟಿಇ ಬೆಂಗಳೂರಿನ ನಿರ್ದೇಶಕ ಅನುರಾಗ್ ಗುಪ್ತಾ ತಿಳಿಸಿದ್ದಾರೆ.







