ಅಸ್ಸಾಂ ನಾಗರಿಕ ಪಟ್ಟಿ ಗಡುವು ವಿಸ್ತರಣೆ, ಐದು ಹೆಚ್ಚುವರಿ ದಾಖಲೆಗೆ ಅವಕಾಶ

ಹೊಸದಿಲ್ಲಿ,ನ.1: ಅಸ್ಸಾಂನ ಹೊಸ ನಾಗರಿಕರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಇದ್ದ ಸಮಯವನ್ನು ವಿಸ್ತರಿಸಿರುವ ಸರ್ವೋಚ್ಚ ನ್ಯಾಯಾಲಯ ಜನರು ಡಿಸೆಂಬರ್ 15ರ ವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದೆ.
ನೆರೆಯ ದೇಶಗಳಿಂದ ಜನರು ವಲಸೆ ಬರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ನೈಜ ನಾಗರಿಕರನ್ನು ಪತ್ತೆಹಚ್ಚುವ ಉದ್ದೇಶವನ್ನು ಹೊಂದಿರುವ ಅಸ್ಸಾಂ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ)ಯಲ್ಲಿ 40 ಲಕ್ಷ ಜನರನ್ನು ಹೊರಗಿಡಲಾಗಿದೆ. ಈ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಯಸುವ ವ್ಯಕ್ತಿಗಳು ಹೆಚ್ಚಿನ ಐದು ದಾಖಲೆಗಳನ್ನು ಒದಗಿಸಬಹುದು ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಪೀಠ ತಿಳಿಸಿದೆ. 1951ರ ಎನ್‌ಆರ್‌ಸಿ, 1966 ಮತ್ತು 71ರ ಮತದಾರರ ಪಟ್ಟಿ, 1971ರವರೆಗಿನ ನಿರಾಶ್ರಿತರ ನೋಂದಣಿ ಪ್ರಮಾಣಪತ್ರ ಮತ್ತು 1971ರವರೆಗೆ ಬಳಸಲ್ಪಟ್ಟ ರೇಶನ್ ಕಾರ್ಡ್, ಈ ಐದು ಹೆಚ್ಚುವರಿ ದಾಖಲೆಗಳಾಗಿವೆ
Next Story





