ಜರ್ಸುಗುಡಾ ವಿಮಾನ ನಿಲ್ದಾಣದ ಮರುನಾಮಕರಣಕ್ಕೆ ಸಂಪುಟದ ಅಸ್ತು

ಹೊಸದಿಲ್ಲಿ,ನ.1: ಒಡಿಶಾ ಸರಕಾರದ ದೀರ್ಘಕಾಲದ ಬೇಡಿಕೆಯಂತೆ ಅಲ್ಲಿಯ ಜರ್ಸುಗುಡಾ ವಿಮಾನ ನಿಲ್ದಾಣವನ್ನು ‘ವೀರ ಸುರೇಂದ್ರ ಸಾಯಿ’ ವಿಮಾನ ನಿಲ್ದಾಣವೆಂದು ಮರುನಾಮಕರಣಗೊಳಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟವು ಗುರುವಾರ ಒಪ್ಪಿಗೆ ನೀಡಿದೆ.
ವೀರ ಸುರೇಂದ್ರ ಸಾಯಿ ಒಡಿಶಾದ ಖ್ಯಾತ ಸ್ವಾತಂತ್ರ ಹೋರಾಟಗಾರಾಗಿದ್ದಾರೆ.
ಒಡಿಶಾ ಸರಕಾರದ ಸಹಭಾಗಿತ್ವದೊಂದಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 210 ಕೋ.ರೂ.ವೆಚ್ಚದಲ್ಲಿ ನಿರ್ಮಿಸಿರುವ ಈ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆ.22ರಂದು ಉದ್ಘಾಟಿಸಿದ್ದರು.
1,027.5 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ವಿಮಾನ ನಿಲ್ದಾಣವು 2,390 ಮೀ.ಉದ್ದದ ರನ್‌ವೇ ಮತ್ತು 4,000 ಚ.ಮೀ.ವಿಸ್ತೀರ್ಣದ ಟರ್ಮಿನಲ್ ಕಟ್ಟಡವನ್ನು ಹೊಂದಿದೆ.
Next Story





