ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಕ್ಲಸ್ಟರ್: ಲಹರಿ ವಿರುದ್ಧ ಜನಜಾಗೃತಿ ಕಾರ್ಯಕ್ರಮ

ಬಂಟ್ವಾಳ, ನ. 2: ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಕ್ಲಸ್ಟರ್ ವತಿಯಿಂದ ಮಾದಕ ದ್ರವ್ಯದ ವಿರುದ್ಧ ಜನಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ಕರ್ನಾಟಕಕ್ಕೆ ಯುವಜನ ಜಾಗೃತಿ ಅಭಿಯಾನದಡಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ 'ಲಹರಿ ವಿರುದ್ಧ ಜನಜಾಗೃತಿ' ಕಾರ್ಯಕ್ರಮ ಗುರುವಾರ ಮುಲ್ಲರಪಟ್ನ ಜಂಕ್ಷನ್‍ಲ್ಲಿ ನಡೆಯಿತು.
ಮುಲ್ಲರಪಟ್ನ ಮುಹಿಯ್ಯುದ್ದೀನ್ ಜುಮಾ ಮಸೀದಿ ಖತೀಬ್ ಅಬ್ದುಲ್ ಖಾದರ್ ಮದನಿ ದುವಾಶೀರ್ವಚನ ನೆರವೇರೆಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಸತ್ತಾರ್ ಕೌಸರಿ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು.
ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಅಧ್ಯಕ್ಷ ಖಾಸಿಂ ದಾರಿಮಿ ಮಾತನಾಡಿ, ಮಾದಕ ವಸ್ತುಗಳ ಸೇವೆನೆಯಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ವಿಶ್ವದ ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಮದ್ಯ ಮತ್ತು ಮಾದಕ ಸೇವನೆ ಯುವ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದೆ. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದು, ಪೆÇೀಷಕರು ಬಗ್ಗೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ ಮಾತನಾಡಿ, ಸಮಾಜದ ಮುಖ್ಯವಾಹಿನಿಗೆ ಬಂದು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಬೇಕಾದ ಯುವಜನಾಂಗ, ಇಂದು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಖೇದಕರ. ಇದರ ವಿರುದ್ಧ ಜಾಗೃತಿ ಅಗತ್ಯ ಎಂದರು.
ಈ ವೇಳೆ ಎಸ್ಕೆಎಸ್ಸೆಸ್ಸೆಫ್ ಮುಲ್ಲರಪಟ್ನ ಶಾಖೆಯ ಅಧ್ಯಕ್ಷ ಅಬ್ದುಲ್ ರಝಾಕ್ ಹಾಗೂ ಕ್ಯಾಂಪಸ್ ವಿಂಗ್ ಸದಸ್ಯ ಝಾಯಿದ್ ಅವರು ಕರಪತ್ರ ವಿತರಣಾ ಜಾಗೃತಿಗೆ ಚಾಲನೆ ನೀಡಿದರು. ಕಾರ್ಯಕ್ರಮದ ಉಸ್ತುವಾರಿಯಾಗಿ ಶಾಕೀರ್ ಆಲಂಪಾಡಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮುಹಿಯ್ಯುದ್ದೀನ್ ಜುಮಾ ಮಸಿದಿಯ ಅಧ್ಯಕ್ಷ ಜಿ.ಕೆ. ಖಾಸಿಂ, ದಾರುಲ್ ಊಲೂಂ ಮದರಸ ಅಧ್ಯಕ್ಷ ಎಂ ಬಿ. ಅಶ್ರಫ್, ನುಸ್ರತುಲ್ ಅನಂ ಸ್ವಲಾತ್ ಕಮಿಟಿ ಅಧ್ಯಕ್ಷ ಜಿ.ಕೆ. ನವಾಝ್, ಎಸ್ಕೆಎಸ್ಸೆಸ್ಸೆಫ್ ಮುಲ್ಲರಪಟ್ನ ಶಾಖೆಯ ಅಧ್ಯಕ್ಷ ಎಂ.ಜಿ. ರಝಾಕ್, ಪ್ರಧಾನ ಕಾರ್ಯದರ್ಶಿ ಎಸ್. ಸಿರಾಜುದ್ದೀನ್, ಸಂಘಟನಾ ಕಾರ್ಯದರ್ಶಿ ರಿಯಾಝ್, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ವಿಖಾಯ ಸಂಘಟನಾ ಕಾರ್ಯದರ್ಶಿ ಖಾಲಿದ್ ಕಲ್ಲಗುಡ್ಡೆ, ಹಮೀದ್ ಹಾಜಿ, ಸುಲೈಮಾನ್ ಎಂ.ಜಿ., ಎಂ. ಎಸ್. ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕಾಂದ್ರೋಡಿ ಕಟ್ಟದಪಡ್ಪು ಸ್ವಾಗತಿಸಿ, ಎಸ್ಕೆಎಸ್ಸೆಸ್ಸೆಫ್ ಮುಲ್ಲರಪಟ್ನ ಶಾಖೆಯ ಸದಸ್ಯ ಶಾಕೀರ್ ಕಾರ್ಯಕ್ರಮ ನಿರೂಪಿಸಿದರು.







