ನ.4ರಂದು ದಾರುನ್ನಜಾತ್‍ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಂಟ್ವಾಳ, ನ. 2: ಕಣಚೂರು ಮೆಡಿಕಲ್ ಕಾಲೇಜು-ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಹಾಗೂ ಕೊಡಂಗಾಯಿ ದಾರುನ್ನಜಾತ್ ಎಜುಕೇಶನ್ ಸೆಂಟರ್ ಟಿಪ್ಪುನಗರ ಇದರ ಸಹಯೋಗದಲ್ಲಿ ದಾರುನ್ನಜಾತ್ ದಶವಾರ್ಷಿಕದ ಪ್ರಯುಕ್ತ ನ.4ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಟಿಪ್ಪುನಗರದ ದಾರುನ್ನಜಾತ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಕಣಚೂರು ಕ್ಯಾಂಪ್ ಕಾರ್ಡ್ ವಿತರಣೆ ಹಾಗೂ ಆರೋಗ್ಯ ಕಾರ್ಡ್ ಅರ್ಜಿ ನೀಡಲಾಗುವುದು ಎಂದು ಹಮೀದ್ ಹಾಜಿ ವಿಟ್ಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





