ಮಂಗಳೂರು: ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು, ನ.2: ಸಿಬಿಐ ಮೇಲೆ ಕೇಂದ್ರ ಸರಕಾರದ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಮಿತಿಯ ವತಿಯಿಂದ ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.
ಮಾಜಿ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಕೇಂದ್ರ ಸರಕಾರಕ್ಕೆ ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂಬುದಕ್ಕೆ ಹಲವು ನಿದರ್ಶನಗಳು ಸಾಕ್ಷಿಯಾಗುತ್ತಿವೆ. ಪ್ರಧಾನಿ ಮೋದಿ ನಿರಂತರವಾಗಿ ಸಿಬಿಐ, ಚುನಾವಣಾ ಆಯೋಗದ ಮೇಲೆ ತನ್ನ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ರಫೇಲ್ ಹಗರಣದ ಬಗ್ಗೆ ಸಿಬಿಐ ಹೆಚ್ಚು ಆಸಕ್ತಿ ವಹಿಸಿ ತನಿಖೆ ನಡೆಸಲಾರಂಭಿಸಿದಂತೆ ತಮ್ಮ ಬಂಡವಾಳ ಬಯಲಾಗುವ ಭಯದಿಂದ ಸಿಬಿಐ ನಿರ್ದೇಶಕ ಅಲೋಶ್ ವರ್ಮಾರನ್ನು ಅವರ ಸ್ಥಾನದಿಂದ ತೆರವುಗೊಳಿಸಲಾಯಿತು. ಬದಲಿಗೆ ಅವರಿಗೆ ಬೇಕಾದ ವ್ಯಕ್ತಿಗಳನ್ನು ನಿರ್ದೇಶಕರಾಗಿ ನೇಮಕಮಾಡಿದ್ದಾರೆ. ಬಿಜೆಪಿಯು ಸಿಬಿಐ ಮೇಲೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಮಹಾಬಲ ಮಾರ್ಲ, ಸುರೇಶ್ ಬಳ್ಳಾಲ್, ಎಂ.ಎಸ್.ಮುಹಮ್ಮದ್, ಎ.ಸಿ.ವಿನಯ್‌ರಾಜ್, ಕಳ್ಳಿಗೆ ತಾರಾನಾಥ ಶೆಟ್ಟಿ, ಮಿಥುನ್ ರೈ, ಮಮತಾ ಗಟ್ಟಿ, ಮರಿಯಮ್ಮ ಥೋಮಸ್, ವಿಶ್ವಾಸ್ ಕುಮಾರ್ ದಾಸ್, ಅಬ್ದುಲ್ ಸಲೀಂ, ಪ್ರವೀಣ್ ಆಳ್ವ, ಮೇರಿಲ್ ರೇಗೋ, ನೀರಜ್ ಪಾಲ್, ಬಿ.ಎ.ಮುಹಮ್ಮದ್ ಹನೀಫ್, ಖಾಲಿದ್ ಉಜಿರೆ, ನಮಿತಾ ರಾವ್, ಲ್ಯಾನ್ಸಿ ಲಾಟ್ ಪಿಂಟೊ, ರಾಧಾಕೃಷ್ಣ, ಅಪ್ಪಿ, ರಮಾನಂದ ಪೂಜಾರಿ, ಬಿ.ಎಂ.ಭರತ್, ಪ್ರಕಾಶ್ ಸಾಲ್ಯಾನ್, ವಿಜಯಾ ಜೆಸಿಂತಾ ಆಲ್ಫ್ರೆಡ್, ಪದ್ಮನಾಭ ನರಿಂಗಾನ, ಪ್ರೇಮ್ ಬಳ್ಳಾಲ್‌ಬಾಗ್, ಸುರೇಶ್ ಶೆಟ್ಟಿ, ಅಬ್ದುಲ್ ರವ್ೂ ಮತ್ತಿತರರು ಉಪಸ್ಥಿತರಿದ್ದರು.







