ಉಡುಪಿ: ನ.4ರಂದು ಗೂಡುದೀಪ ಸ್ಪರ್ಧೆ
ಉಡುಪಿ, ನ.2: ದೀಪಾವಳಿಯ ಮೆರುಗನ್ನು ಹೆಚ್ಚಿಸಲು ದಾಯ್ಜಿವರ್ಲ್ಡ್ ವಾಹಿನಿ ಉಡುಪಿ ನ್ಯೂಸ್ ಬ್ಯುರೋ ಹಾಗು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಇ ಜಂಟಿಯಾಗಿ ಆಕಾಶದೀಪ- ಗೂಡುದೀಪ ರಚನಾ ಸ್ಪರ್ಧೆಯನ್ನು ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ವಠಾರದಲ್ಲಿ ನ.4ರಂದು ಹಮ್ಮಿಕೊಂಡಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳಿವೆ. ಸ್ಪರ್ಧೆಯ ಕೊನೆಯಲ್ಲಿ ಎಲ್ಲಾ ಗೂಡು ದೀಪಗಳನ್ನೂ ಪ್ರದರ್ಶಿಸಲಾಗುವುದು. ಆಸಕ್ತರು ತಮ್ಮ ಹೆಸರನ್ನು ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ 7338637686/83/9886375473ಕ್ಕೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





