ಅಯ್ಯಪ್ಪ ಭಕ್ತನ ಶವ ಪತ್ತೆ: ಪತ್ತನಂತಿಟ್ಟ ಬಂದ್

ತಿರುವನಂತಪುರ, ನ. 2: ಪತ್ತನಂತಿಟ್ಟದ ಅರಣ್ಯ ಪ್ರದೇಶದಲ್ಲಿ ಅಯ್ಯಪ್ಪ ಭಕ್ತರೊಬ್ಬರ ಮೃತದೇಹ ಪತ್ತೆಯಾದ ಬಳಿಕ ಬಿಜೆಪಿ ಶುಕ್ರವಾರ ಪತ್ತನಂತಿಟ್ಟ ಜಿಲ್ಲೆಯಲ್ಲಿ 12 ಗಂಟೆಗಳ ಬಂದ್‌ಗೆ ಕರೆ ನೀಡಿತ್ತು. ಅರಣ್ಯದಲ್ಲಿ ಪತ್ತೆಯಾದ ಮೃತದೇಹ ಪಂದಳಂನ ಮೂಲಾಂಬುಳದ ನಿವಾಸಿ ಶಿವದಾಸ (60) ಅವರದ್ದು ಎಂದು ಗುರುತಿಸಲಾಗಿದೆ.
ಶಿವದಾಸ್ ಅವರು ಕಾಣೆಯಾಗಿದ್ದಾರೆ ಎಂದು ಆರೋಪಿಸಿ ಅವರ ಕುಟುಂಬ ಪೊಲೀಸ್ ದೂರು ದಾಖಲಿಸಿತ್ತು. ಕಳೆದ ತಿಂಗಳು ನೀಲಕ್ಕಲ್‌ನಲ್ಲಿ ಶಬರಿಮಲೆ ತೀರ್ಪಿನ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಕ್ರೂರತೆಗೆ ಶಿವದಾಸ್ ಬಲಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ನೀಲಕ್ಕಲ್‌ನಲ್ಲಿ ಪೊಲೀಸ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಶಿವದಾಸ್ ಕಾಣೆಯಾಗಿದ್ದರು ಎಂಬ ಆರೋಪವನ್ನು ಜಿಲ್ಲಾ ಪೊಲೀಸ್ ವರಿಷ್ಠ ಪಿ.ಟಿ. ನಾರಾಯಣ್ ನಿರಾಕರಿಸಿದ್ದಾರೆ. ಕಾಣೆಯಾದ ಬಳಿಕ ಶಿವದಾಸ್ ಅಕ್ಟೋಬರ್ 19ರಂದು ತನ್ನ ಮನೆಗೆ ಕರೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
Next Story





