ಗಾಯಕಿ ವಸುಂಧರಾಗೆ ನಿಂದನೆ: ಠಾಣೆಗೆ ದೂರು

ಗಾಯಕಿ ವಸುಂಧರಾ
ಬೆಂಗಳೂರು, ನ.2: ಗಾಯಕಿ, ನಟಿ ವಸುಂಧರಾ ದಾಸ್ ಅವರ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ.
ನಗರದ ಮಲ್ಲೇಶ್ವರಂನ 18 ನೇ ಕ್ರಾಸ್ನಲ್ಲಿ ಅ.29 ರಂದು ಸಂಜೆ 4:30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕಾರು ಚಾಲಕನೊಬ್ಬನಿಗೆ ದಾರಿ ಬಿಟ್ಟು ಕೊಡಲಿಲ್ಲ ಎಂಬ ಕಾರಣಕ್ಕೆ ವಸುಂಧರಾ ಅವರ ಕಾರನ್ನು ಬೆನ್ನಟ್ಟಿ, ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ವಸುಂಧರಾ ದಾಸ್ ಅವರೊಡನೆ ತೀವ್ರ ವಾಗ್ವಾದ ನಡೆಸಿದ್ದು, ಈ ವೇಳೆ ಸಾರ್ವಜನಿಕರು ಜಮಾವಣೆಗೊಂಡಿದ್ದಾರೆ. ಅಷ್ಟರಲ್ಲಾಗಲೇ ಚಾಲಕ ಸ್ಥಳದಿಂದ ತೆರಳಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ವಸುಂಧರಾ ದಾಸ್ ಅವರು ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದು, ಸೆಕ್ಷನ್ 509, 341, 364 ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.
Next Story





