ಜೂಜಾಟ: ಎಂಟು ಮಂದಿ ಆರೋಪಿಗಳ ಸೆರೆ
ಬಂಟ್ವಾಳ, ನ. 2: ಜೂಜಾಟದಲ್ಲಿ ತೊಡಗಿದ್ದ ಆರೋಪ ಮೇರೆಗೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿ 8 ಮಂದಿ ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ವಾಮದಪದವು ಪರಿಸರದ ನಿವಾಸಿಗಳಾದ ಶ್ರೀಧರ ಶೆಟ್ಟಿ, ರವಿ, ರಾಮಣ್ಣ ಶೆಟ್ಟಿ, ಕೊರಗು, ಯೋಗೀಶ್, ಮುದ್ದ, ಜಯಶೆಟ್ಟಿ, ಗೋಪಾಲ ಬಂಧಿತ ಆರೋಪಿಗಳು. ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಚೆನ್ನೆತ್ತೋಡಿ ಗ್ರಾಮದ ವಾಮದಪದವು ಬಳಿಯ ಗುಡ್ಡವೊಂದರಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. 9,590 ರೂ. ಹಾಗೂ ಇತರ ವಸ್ತುಗಳನ್ನು ವಶಪಡಿಸಲಾಗಿದೆ.
ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಂಜಾಲಕಟ್ಟೆ ಠಾಣಾ ಎಸ್ಸೈ ಸತೀಶ್ ಬಲ್ಲಾಳ್ ಅವರ ನೇತೃತ್ವದಲ್ಲಿ ಎಎಸ್ಸೈ ಗಿರಿಯಪ್ಪ, ಸಿಬ್ಬಂದಿ ಶೀನ ಗೌಡ, ಪ್ರಶಾಂತ್, ಗಂಗಾದರ, ಸಾಬು, ಅಮಿರ್ಜಿ, ಪ್ರಭಾಕರ್ ದಾಳಿಯಲ್ಲಿದ್ದರು.
Next Story





