ಶ್ರೀದೇವಿ ಕಾಲೇಜಿನಲ್ಲಿ ಸಂಪ್ರದಾಯದ ದಿನ ಆಚರಣೆ

ಮಂಗಳೂರು, ನ. 2: ಕೆಂಜಾರಿನ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗದಿಂದ ‘ಇಗ್‌ನೈಟ್ ಪ್ರೊ ಐಟಿ ಫೆಸ್ಟ್ ಮತ್ತು ಸಂಪ್ರದಾಯದ ದಿನ’ವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಜುಗೊ ಸ್ಟುಡಿಯೋಸ್‌ನ ಉಪಾಧ್ಯಕ್ಷ ಅಭಿಜಿತ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಂಸಿಎ ವಿಭಾಗದ ಮುಖ್ಯಸ್ಥೆ ಪ್ರೊ.ನೇತ್ರಾವತಿ ಪಿ.ಎಸ್., ಉಪಾಧ್ಯಕ್ಷ ಅವೀಶ್ ಉಪಸ್ಥಿತರಿದ್ದರು.
ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದಿಲೀಪ್‌ಕುಮಾರ್ ಕೆ. ಅತಿಥಿಗಳನ್ನು ಸ್ವಾಗತಿಸಿದರು. ಅಂಜು ಸುಸಾನ್ ಜಾಕೋಬ್ ಅತಿಥಿಗಳನ್ನು ಪರಿಚಯಿಸಿದರು. ಯಶಸ್ವಿ ಕಾರ್ಯಕ್ರಮ ನಿರೂಪಿಸಿದರು. ವೀಕ್ಷಿತ ವಂದಿಸಿದರು.
Next Story





