ಹನೂರು: ಮೇಕೆ ಕದ್ದು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯ ಬಂಧನ

ಹನೂರು,ನ.2: ಮೇಕೆಗಳನ್ನು ಕದ್ದು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹನೂರು ಪೊಲೀಸರು ಬಂಧಿಸಿದ್ದಾರೆ.
ಹನೂರು ಸಮೀಪದ ಜಡೇಸ್ವಾಮಿದೊಡ್ಡಿ ಗ್ರಾಮದ ಚಂದ್ರು ಅಲಿಯಾಸ್ ತಮ್ಮಯ್ಯ ಬಂಧಿತ ಆರೋಪಿ.
ಜಡೇಸ್ವಾಮಿ ಗ್ರಾಮದ ಮಹಿಳೆ ಪಂದಮ್ಮ ಎಂಬವರಿಗೆ ಸೇರಿದ ಮೇಕೆಗಳನ್ನು ಕದ್ದು ಸಾಗಿಸುತ್ತಿದ್ದಾಗ ಹನೂರು ಪೊಲೀಸರನ್ನು ಕಂಡ ತಮ್ಮಯ್ಯ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಬೆನ್ನಟ್ಟಿದ ಪೊಲೀಸರು ತಮ್ಮಯ್ಯರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





