ಸಿಬಿಐ ನಿರ್ದೇಶಕ ಅಲೋಕ್ ವರ್ಮಾರನ್ನು ಬೆಂಬಲಿಸಿ ಸುಪ್ರೀಂ ಮೆಟ್ಟಿಲೇರಿದ ಖರ್ಗೆ

ಹೊಸದಿಲ್ಲಿ, ನ.3: ಸಿಬಿಐ ನಿರ್ದೇಶಕ ಅಲೋಕ್ ವರ್ಮಾಗೆ ಪೂರ್ಣಾವಧಿ ಪೂರೈಸಲು ಅವಕಾಶ ನೀಡಬೇಕು ಎಂದು ಕೋರಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ವರ್ಮಾರನ್ನು ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿದ ಖರ್ಗೆ ತಾವು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ಜಾಗೃತ ಆಯೋಗ(ಸಿವಿಸಿ)ಅಥವಾ ಸರಕಾರಕ್ಕೆ ವರ್ಮಾ ಅವರ ಅಧಿಕಾರದ ಅವಧಿಯನ್ನು ಮೊಟಕುಗೊಳಿಸುವ ಅಧಿಕಾರವಿಲ್ಲ, ಕಾನೂನಿನನ್ವಯ ಅವರಿಗೆ ಎರಡು ವರ್ಷ ಪೂರೈಸುವ ಅವಕಾಶವಿದೆ. ಸರಕಾರದ ಹೆಜ್ಜೆ ಅನಿಯಂತ್ರಿತ ಹಾಗೂ ಅಕ್ರಮ ಎಂದು ಹೇಳಿದ್ದಾರೆ.
ರಫೇಲ್ ಯುದ್ದ ವಿಮಾನ ಒಪ್ಪಂದದ ಬಗ್ಗೆ ವರ್ಮಾ ತನಿಖೆ ನಡೆಸಲು ಬಯಸಿದ್ದರು. ಹೀಗಾಗಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದ ಬಳಿಕ ಇದೀಗ ಖರ್ಗೆ ಅವರು ಸಿಬಿಐ ನಿರ್ದೇಶಕರನ್ನು ಬೆಂಬಲಿಸಿ ಸುಪ್ರೀಂಕೋರ್ಟಿಗೆ ತೆರಳಿದ್ದಾರೆ.
Next Story





