ಎನ್‌ಎಂಪಿಟಿ: ಹಡಗಿನಿಂದ ತೈಲ ಸೋರಿಕೆ; ತಪ್ಪಿದ ಭಾರೀ ಅನಾಹುತ

ಮಂಗಳೂರು, ನ.3: ನಗರದ ಎನ್‌ಎಂಪಿಟಿ (ನವ ಮಂಗಳೂರು ಬಂದರು ಟ್ರಸ್ಟ್) ಬಂದರಿನಲ್ಲಿ ಹಡಗಿನ ಟ್ಯಾಂಕರ್ ಒಡೆದ ಪರಿಣಾಮ ನೂರಾರು ಲೀಟರ್ ಪ್ರಮಾಣದ ತೈಲ ಸಮುದ್ರಕ್ಕೆ ಸೇರಿದ ಘಟನೆ ನಡೆದಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ಶನಿವಾರ ಬೆಳಗ್ಗೆ ಎನ್‌ಎಂಪಿಟಿಯ ಜೆಟ್ಟಿ ಸಂಖ್ಯೆ ಎರಡಕ್ಕೆ ಬಂದ ಎಕ್ಸ್‌ಪ್ರೆಸ್ ಬ್ರಹ್ಮಪುತ್ರ ಹಡಗು ಲಂಗರು ಹಾಕುವಾಗ ಬಂದರಿಗೆ ಢಿಕ್ಕಿ ಹೊಡೆದಿದೆ. ಹಡಗಿನ ತೈಲ ಟ್ಯಾಂಕರ್ ಹಾನಿಯಾಗಿ ಭಾರೀ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿದ್ದು, ನೂರಾರು ಲೀಟರ್ ತೈಲ ಸಮುದ್ರದ ಪಾಲಾಗಿದೆ. ಬೆಳಗ್ಗೆಯಿಂದಲೇ ತೈಲ ಸೋರಿಕೆಯಾಗಿದ್ದು, ಸಂಜೆ ವೇಳೆ ನಿಯಂತ್ರಣಕ್ಕೆ ಬಂದಿದೆ.
ಆನಂತರ ಎನ್‌ಎಂಪಿಟಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ಮೂಲಕ ತೈಲ ಸೋರಿಕೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
Next Story





