ನಟ ದುನಿಯಾ ವಿಜಿ ಸೇರಿ 7 ಜನರಿಗೆ ನೋಟಿಸ್

ಬೆಂಗಳೂರು, ನ.3: ಶಾಂತಿ ಮತ್ತು ಸುವ್ಯವಸ್ಥೆ ಹದಗೆಡಿಸಿದ ಆರೋಪದ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಸೇರಿ 7 ಜನರಿಗೆ ನಗರದ ಗಿರಿನಗರ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ನಗರದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರ ಎದುರು ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಸೇರಿ 7 ಮಂದಿ ನ.5ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಪಾನಿಪುರಿ ಕಿಟ್ಟಿ ಮೇಲಿನ ಹಲ್ಲೆ ಆರೋಪ ಪ್ರಕರಣ, ದುನಿಯಾ ವಿಜಯ್ ಕುಟುಂಬ ಗಲಾಟೆ ತಾರಕಕ್ಕೇರಿದ್ದು, ಅದು ನಿಯಂತ್ರಣಕ್ಕೆ ಬರುವ ಸುಳಿವೇ ಸಿಗುತ್ತಿಲ್ಲ. ಒಮ್ಮೆ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನಾ ದೂರು ನೀಡಿದರೆ, ಮತ್ತೊಮ್ಮೆ ದುನಿಯಾ ವಿಜಯ್ ದೂರು ನೀಡುತ್ತಿದ್ದಾರೆ. ಸತತವಾಗಿ ಒಬ್ಬರ ಮೇಲೊಬ್ಬರು ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಇವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
Next Story





